ಬೆಂಗಳೂರು : ಬೆನ್ನು ನೋವಿನ ಸಮಸ್ಯೆ ಹಿನ್ನೆಲೆಯಲ್ಲಿ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಕೊಲೆ ಆರೋಪಿಯಾಗಿರುವ ನಟ ದರ್ಶನವರು ಹೈಕೋರ್ಟ್ ನಿಂದ ಮಧ್ಯಂತರ ಜಾಮೀನು ಪಡೆದು ಬೆಂಗಳೂರಿನ ಕೆಂಗೇರಿಯ ಬಳಿ ಇರುವ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ದರ್ಶನ್ ಗೆ ಚಿಕಿತ್ಸೆ ನೀಡಲಾಗುತ್ತದೆ. ಕೊಲೆ ಆರೋಪಿ ದರ್ಶನಿಗೆ ಪದೇಪದೇ ಮೆಡಿಕಲ್ ಟೆಸ್ಟ್ ಮಾಡಲಾಗುತ್ತಿದೆ. ಇಂದು ದರ್ಶನ್ ವೈದ್ಯಕೀಯ ಪರೀಕ್ಷೆಯ ವರದಿಗಳು ವೈದ್ಯರ ಕೈ ಸೇರಲಿದೆ ಪರೀಕ್ಷೆಯ ವರದಿ ರಿಪೋರ್ಟ್ ನೋಡಿ ಚಿಕಿತ್ಸೆ ಬಗ್ಗೆ ವೈದ್ಯರು ನಿರ್ಧಾರ ಮಾಡಲಿದ್ದಾರೆ. ಬುಧವಾರ ದರ್ಶನ್ ರಿಪೋರ್ಟ್ ಕೋರ್ಟಿಗೆ ಸಲ್ಲಿಕೆ ಆಗಲಿದೆ.
ದರ್ಶನ್ ಅವರ ವೈದ್ಯಕೀಯ ಅವರಾದಿ ವೈದ್ಯರ ಕೈ ಸೇರಿದ ಬಳಿಕ ದರ್ಶನ ಮತ್ತು ಕುಟುಂಬದ ಜೊತೆಗೆ ವೈದ್ಯರು ಚರ್ಚಿಸಲಿದ್ದಾರೆ. ನಂತರ ಬೆನ್ನುನೋವಿನ ಆಪರೇಷನ್ ಮಾಡಬೇಕಾ? ಅಥವಾ ಫಿಸಿಯೊಥೆರಪಿ ಸಾಕಾ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ವೈದ್ಯಕೀಯ ವರದಿ ಚಿಕಿತ್ಸಾ ವರದಿ ಸಿದ್ಧಪಡಿಸಲಿದ್ದಾರೆ. ಹಾಗಾಗಿ ದರ್ಶನ್ ವೈದ್ಯಕೀಯ ವರದಿಯನ್ನು ಮಂಗಳವಾರ ಅಥವಾ ಬುಧವಾರ ನ್ಯಾಯಾಲಯಕ್ಕೆ ವೈದ್ಯಕೀಯ ವರದಿ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.