ಬೀದರ್ : ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶೈಲೇಂದ್ರ ಬೆಲ್ದಾಳೆ ಹಾಗೂ ಆರ್ಟಿಓ ಇನ್ಸ್ಪೆಕ್ಟರ್ ನಡುವೆ ಟಾಕ್ ವಾರ್ ನಡೆದಿದ್ದು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶೈಲೇಂದ್ರ ಬೆಲ್ದಾಳೆ ಹಾಗೂ ಆರ್ ಟಿ ಓ ಇನ್ಸ್ಪೆಕ್ಟರ್ ಮಂಜುನಾಥ್ ನಡುವಿನ ಟಾಕ್ ವಾರ್ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಾಸಕ ಶೈಲೇಂದ್ರ ಕಡೆ ಕೈಮಾಡಿ ಮಂಜುನಾಥ ಧಮ್ಕಿ ಹಾಕಿರುವ ಆರೋಪ ಕೇಳಿ ಬಂದಿದ್ದು, ಫೇಸ್ಬುಕ್ ಹಾಗೂ ವಾಟ್ಸಪ್ ನಲ್ಲಿ ಟಾಕ್ ವಾರ್ ವಿಡಿಯೋ ಸದ್ಯ ಹರಿದಾಡುತ್ತಿದೆ. ಆಡಿಯೋ ಬಿಡುಗಡೆ ಮಾಡಿ ಶಾಸಕರಿಗೆ ಮಂಜುನಾಥ್ ಕೊರವಿ ಮನವಿ ಮಾಡಿದ್ದಾರೆ. ಪೂರ್ತಿ ವಿಡಿಯೋ ಬಿಡುಗಡೆ ಮಾಡುವಂತೆ ಆರ್ ಟಿ ಓ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ನಾನೊಬ್ಬ ಸಣ್ಣ ಅಧಿಕಾರಿ ನಾನು ಮಾತನಾಡುವ ವಿಡಿಯೋ ಮಾಡಿಸಿದ್ದಾರೆ. ನಾನು ಮಾತನಾಡಿದ್ದ ವಿಡಿಯೋ ಎಡಿಟ್ ಮಾಡಿ ಬಿಡುಗಡೆ ಮಾಡಿದ್ದಾರೆ. ಸಚಿವರಾದ ಈಶ್ವರ್ ಖಂಡ್ರೆ ರಹೀಂ ಖಾನ್ ಗೆ ವಿಡಿಯೋ ರವಾನಿಸಿದ್ದಾರೆ. ಪೂರ್ತಿ ವಿಡಿಯೋ ಹಾಕಿದ್ದರೆ ಮಾತನಾಡಿದ ಸಂಭಾಷಣೆ ಗೊತ್ತಾಗುತ್ತಿತ್ತು.ಶಾಸಕರು ಕಾರ್ಯಕರ್ತರ ಜೊತೆಗೆ ಏನು ಮಾತನಾಡಿದ್ದೇನೆ ಎಂದು ಗೊತ್ತಾಗುತ್ತದೆ.ಜನರಿಗೆ ಗೊತ್ತಾಗಬೇಕಾದರೆ ಶಾಸಕರು ಪೂರ್ತಿ ವಿಡಿಯೋ ಬಿಡುಗಡೆ ಮಾಡಲಿ. ಪೂರ್ತಿ ವಿಡಿಯೋ ಬಿಡುಗಡೆ ಮಾಡುವಂತೆ ಆರ್ ಟಿ ಓ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ