ಚಿಕ್ಕಮಗಳೂರು : ರಾಜ್ಯದಲ್ಲಿ ವಕ್ಫ್ ವಿವಾದ ಭುಗಿಲೆಳೋಕು ಮುನ್ನ ಸಿಎಂ ಸಿದ್ದರಾಮಯ್ಯ ದಿಟ್ಟ ನಿರ್ಧಾರ ಕೈಗೊಂಡಿದ್ದು, ಇಲ್ಲಿಯವರೆಗೆ ಯಾವ ರೈತರಿಗೆ ನೋಟಿಸ್ ಕೊಟ್ಟಿದ್ದಿರೋ ಅದೆಲ್ಲವನ್ನು ಕೂಡಲೇ ಹಿಂಪಡೆಯಿರಿ ಎಂದು ವಕ್ಫ್ ಮಂಡಳಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರಿಂದ ಬಿಜೆಪಿ ಪರಿಷತ್ ಸದಸ್ಯ ಸಿಟಿ ರವಿ ಸಿಎಂ ಸಿದ್ದರಾಮಯ್ಯ ಅವರ ಈ ಒಂದು ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಈ ಕುರಿತು ಸಿಟಿ ರವಿ ಪ್ರತಿಕ್ರಿಯೆ ನೀಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ರೈತರಿಗೆ ಕೊಟ್ಟಿರುವ ನೋಟಿಸ್ ವಾಪಸ್ ಪಡೆಯಲು ಸೂಚಿಸಿದ್ದೀರಿ ರೈತರ ಪಹಣಿಯ ಕಾಲಂ ನಂಬರ್ 11ರಲ್ಲಿ ವಕ್ಫ್ ಅಂತ ನಮೂದಿಸಿದ್ದನ್ನು ಹಿಂಪಡೆಯಬೇಕು ಎಂದು ಸೂಚಿಸಿದ್ದೀರಿ. ಇದು ಕೇವಲ ಅರ್ಧ ನ್ಯಾಯ ಕೊಟ್ಟಂತಾಗಿದೆ. ವಕ್ಫ್ ಕಾಯಿದೆ ರದ್ದಾದ ಮೇಲೆ ನಮಗೆ ಪೂರ್ತಿ ನ್ಯಾಯ ಸಿಗುತ್ತದೆ. ನೀವು ಜನಾಭಿಪ್ರಾಯಕ್ಕೆ ಮಣಿದ್ದಿದಿರಿ. ಜನಾಕ್ರೋಶಕ್ಕೆ ಹೆದರಿದ್ದೀರಿ. ಪ್ರಜಾಪ್ರಭುತ್ವದಲ್ಲಿ ಜನಾಕ್ರೋಶಕ್ಕೆ ಹೆದರುವುದು ಒಳ್ಳೆಯ ಸಂಗತಿ ಎಂದರು.
ನೀವು ಇಂದು ವಕ್ಫ್ ವಿವಾದಕ್ಕೆ ಸಂಬಂಧಿಸಿ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದೀಗ ನೀವು ಜನಾಭಿಪ್ರಾಯಕ್ಕೆ ಮಣಿದಿದ್ದೀರಾ ಹಾಗೂ ಜನಾಕ್ರೋಶಕ್ಕೆ ಹೆದರಿದ್ದೀರಾ ಎಂದು ತಿಳಿಯುತ್ತೆ. ಇನ್ನು ಪ್ರಜಾಪ್ರಭುತ್ವದಲ್ಲಿ ಜನಾಕ್ರೋಶಕ್ಕೆ ಹೆದರುವುದು ಒಳ್ಳೆಯ ಸಂಗತಿ ಆಗಿದೆ. ಆದ್ದರಿಂದ ಇದನ್ನು ನಾನು ಸ್ವಾಗತಿಸುತ್ತೇನೆ. ನಿಮಗೆ ಪ್ರಾಮಾಣಿಕತೆ ಇದ್ದರೆ ಮುಂದಿನ ದಿನಗಳಲ್ಲಿ ವಕ್ಫ್ ಕಾಯ್ದೆ ವಿರುದ್ಧ ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ ಎಂದು ಸಿಟಿ ರವಿ ಸಿಎಂ ಸವಾಲೆಸಗಿದ್ದಾರೆ.