ವಿಜಯಪುರ : ವಕ್ಫ್ ವಿಚಾರವಾಗಿ ಇಂದು ಸಿಎಂ ಸಿದ್ದರಾಮಯ್ಯ ಅವರು, ವಕ್ಫ್ ಮಂಡಳಿ ಸಭೆಯಲ್ಲಿ ರೈತರಿಗೆ ನೀಡಿದ ನೋಟಿಸ್ಕೊಳ್ಳಲು ಕೂಡಲೇ ಹಿಂಪಡೆಯಿರಿ ಎಂದು ಖಡಕ್ ಸೂಚನೆ ನೀಡಿದ್ದಾರೆ.ಇದೆ ವಿಚಾರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ವಕ್ಫ್ ವಿಚಾರವಾಗಿ ನಾವು ಯಾರಿಗೂ ನೋಟಿಸ್ ನೀಡಿಲ್ಲ ಎಂದು ತಿಳಿಸಿದರು. ಈ ಮೂಲಕ ಸಚಿವ ಜಮೀರ್ ಅಹ್ಮದ್ ಉಲ್ಟಾ ಹೊಡೆದರಾ ಎನ್ನಲಾಗುತ್ತಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ವಕ್ಫ್ ವಿಚಾರದಲ್ಲಿ ಬಿಜೆಪಿ ಅವರು ಅನವಶ್ಯಕ ಗೊಂದಲ ಸೃಷ್ಟಿ ಮಾಡಿದ್ದಾರೆ. ಜಿಲ್ಲೆಯ ಹೊನವಾಡದಲ್ಲಿ ಕೇವಲ 11 ಎಕರೆ ಮಾತ್ರ ವಕ್ಫ್ ಅಸ್ತಿಯಿದೆ. ಆದರೆ ಅಲ್ಲಿ 1,200 ಎಕರೆ ಇದೆ ಅಂತಾ ಹೇಳಿದ್ದಾರೆ. ನಾವು ಯಾರಿಗೂ ನೋಟಿಸ್ ನೀಡಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದರು.
ಬಿಜೆಪಿ ಸರಕಾರದಲ್ಲೂ ವಕ್ಫ್ ಆಸ್ತಿ ಅತಿಕ್ರಮಿಸಿದ ಸಾವಿರಾರು ಜನರಿಗೆ ನೋಟಿಸ್ ನೀಡಲಾಗಿತ್ತು. ವಕ್ಫ್ ಆಸ್ತಿಯಲ್ಲಿ ಒಂದು ಇಂಚು ಸರಕಾರದ್ದು ಇಲ್ಲ, ವಕ್ಫ್ ಆಸ್ತಿಯೇ ಸಾಕಷ್ಟು ಒತ್ತುವರಿಯಾಗಿದೆ. ಅದನ್ನ ಸರಿಪಡಿಸುವ ಕೆಲಸ ನಾನು ಮಾಡುತ್ತಿದ್ದೇನೆ ಎಂದರು.
ಇನ್ನು ಇಂದು ವಕ್ಫ್ ವಿಚಾರವಾಗಿ ಸೇಮ ಸಿದ್ದರಾಮಯ್ಯ ಅಧಿಕಾರಿಗಳಿಗೆ ನೋಟಿಸ್ ಪಡೆಯಲು ಸೂಚನೆ ನೀಡಿರುವ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಇವತ್ತು ಅಧಿಕಾರಿಗಳಿಗೆ ನೋಟಿಸ್ ವಾಪಸ್ ಪಡೆಯಲು ಸೂಚನೆಯನ್ನು ಕೊಟ್ಟಿದ್ದಾರೆ. ನೋಟಿಸ್ ಹಿಂಪಡೆಯುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ. ನಿನ್ನೆ ನಾನು ಇದನ್ನು ಹೇಳಿದೆ ರೈತರು ಆತಂಕ ಪಡಿಬೇಡಿ ಎಂದು ನಾನು ಹೇಳಿದ್ದೆ ಎಂದು ತಿಳಿಸಿದರು.