ದಾವಣಗೆರೆ: ಅಲ್ಪಸಂಖ್ಯಾತ ಹಾಗೂ ವಕ್ಪ್ ಖಾತೆಯ ಸಚಿವ ಜಮೀರ್ ಆಹಮ್ಮದ್ ಖಾನ್ ಓರ್ವ ಮತಾಂಧ.ಕೂಡಲೇ ಇವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವೇ ಪಾಕಿಸ್ತಾನಕ್ಕೆ ಓಡಿಸಬೇಕು ಎಂದು ಮಾಜಿ ಸಚಿವ ಎ.ಪಿ.ರೇಣುಕಾಚಾರ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಚಿವ ಜಮೀರ್ ಆಹಮ್ಮದ್ ಖಾನ್ ಅಂತಹವರನ್ನು ಯಾವುದೇ ಕಾರಣಕ್ಕೂ ಸಚಿವ ಸಂಪುಟದಲ್ಲಿ ಇಟ್ಟುಕೊಳ್ಳಬಾರದು. ಇಲ್ಲದಿದ್ದರೆ, ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ವಿಧಾನಸೌಧದ ಮೂರನೇ ಮಹಡಿಯಿಂದ ಜಾಗ ಖಾಲಿ ಮಾಡಿಸುತ್ತಾರೆ ಎಂದು ಎಚ್ಚರಿಕೆ ಕೊಟ್ಟರು.
ಅಧಿಕಾರಿಗಳ ಮೂಲಕ ನೋಟೀಸ್ ಕೊಡಲು ಜಮೀರ್ ಅವರಿಗೆ ಅಧಿಕಾರ ಕೊಟ್ಡಿದ್ದು ಯಾರು?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ ಎಂದು ಕಿಡಿಕಾರಿದರು.
ಜಮೀರ್ ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರ ಸಚಿವರಲ್ಲ. ಅವರು ಇದನ್ನು ಮೊದಲು ಅರ್ಧಮಾಡಿಕೊಳ್ಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು
ಕೂಡಲೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು.ಇಲ್ಲದಿದ್ದರೆ, ಇದೇ 4 ರಂದು ಬಿಜೆಪಿ ಅಧ್ಯಕ್ಷರು ಕರೆಕೊಟ್ಟರುವ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅತಿ ಹೆಚ್ಚು ಮುಸ್ಲಿಂರು ಇರುವ ರಾಷ್ಟ್ರಗಳಲ್ಲೇ ವಕ್ಪ್ ಬೋರ್ಡ್ ಇಲ್ಲ. ಜಾತ್ಯತೀತ ರಾಷ್ಟ್ರವಾಗಿರುವ ಭಾರತದಲ್ಲಿ ಒಂದು ಸಮುದಾಯಕ್ಕೆ ಪ್ರತ್ಯೇಕ ಬೋರ್ಡ್ ಅಗತ್ಯತೆ ಇದೆಯೇ ಎಂದು ಪ್ರಶ್ನೆ ಮಾಡಿದರು.
ಪಾಕಿಸ್ತಾನ, ಅಫ್ಘಾನಿಸ್ತಾನ, ಸಿರಿಯಾ, ಇರಾನ್, ಇರಾಕ್ ಅಂತಹ ದೇಶಗಳಲ್ಲೇ ವಕ್ಪ್ ಬೋರ್ಡ್ ಅಸ್ಥಿತ್ವದಲ್ಲಿ ಇಲ್ಲ. ಕೇವಲ ಆ ಸಮುದಾಯದ ಪು
ತುಷ್ಟೀಕರಣಕ್ಕಾಗಿ ಬ್ರಿಟಿಷರು ಜಾರಿಗೆ ತಂದಿದ್ಷ ಕಾಯ್ದೆಯನ್ನು ಹಿಂದಿನ ಪ್ರಧಾನಿಗಳು ಜಾರಿಗೆ ತಂದರು.
ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು, ಪಿ.ವಿ ನರಸಿಂಹ ರಾವ್ ಅವರುಗಳು ಮಾಡಿದ ಪ್ರಮಾಣದಿಂದ ಇಂತಹ ಸಮಸ್ಯೆ ಉಲ್ಭಣವಾಯಿತು ಎಂದು ವಾಗ್ದಾಳಿ ನಡೆಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತುಂಬಾ ಕಲಾವಿದರು. ಕೆಲವರು ಬಣ್ಷ ಹಚ್ಚಿಕೊಂಡು ನಟನೆ ಮಾಡಿದರೆ, ಇವರ ಮಾತ್ರ ಬಣ್ಣ ಇಲ್ಲದೆ, ನಟನೆ ಮಾಡುವ ಚತುರರು ಎಂದು ವ್ಯಂಗ್ಯವಾಡಿದರು.
ಗ್ಯಾರಂಟಿ ಯೋಜನೆಗಳನ್ನು ಹಂತಹಂತವಾಗಿ ನಿಲ್ಲಿಸಲು ಸರ್ಕಾರವೇ ಷಡ್ಯಂತ್ರ ನಡೆಸಿದೆ.ಶಕ್ತಿ ಯೋಜನೆಯನ್ನು ಪರಿಷ್ಕರಣೆ ಮಾಡುವುದಾಗಿ ಹೇಳಿರುವುದು ಇದರ ಮುನ್ಸೂಚನೆ ಎಂಬ ಎಂದು ಹೇಳಿದರು.
ಶಿವಕುಮಾರ್ ಅವರಿಗೆ ಯಾರು ಪತ್ರ ಬರೆದಿದ್ದಾರೆ ಎಂಬುದನ್ನು ಪತ್ರ ಬಿಡುಗಡೆ ಮಾಡಲಿ ಎಂದು ಬಹಿರಂಗ ಸವಾಲು ಹಾಕಿದರು.
ಪ್ರಧಾನಿಗೆ ಪತ್ರ
ರಾಜ್ಯಾದ್ಯಂತ ರೈತರ ಹಾಗೂ ಹಿಂದೂ ದೇವಾಲಯಗಳಿಗೆ ನೋಟೀಸ್ ನೀಡುತ್ತಿರುವ ವಕ್ಪ್ ಬೋರ್ಡ್ ಅನ್ನು ತಕ್ಷಣವೇ ರದ್ದುಪಡುಸಬೇತು ಎಂದು ಕೋರಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ಕಳೆದ 27/ರಂದು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ಈ ಮೇಲ್ ಮಾಡಿರುವ ಅವರು, ವಕ್ಪ್ ಬೋರ್ಡ್ ಏಕೆ ರದ್ದುಪಡಿಸಬೇಕು ಎಂಬುದನ್ನು ಪತ್ರದಲ್ಲಿ ಸವಿಸ್ತರವಾಗಿ ಮನರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾನೆ.
ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳಲ್ಲಿ ಮುಂದೆಯೇ ಪ್ರಧಾನಿ ಗೆ ಬರೆದಿರುವ ಪತ್ರವನ್ನು ಬಿಡುಗಡೆ ಮಾಡಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಕ್ಪ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯಲಾಗಿದೆ. ಕರ್ನಾಟಕದಲ್ಲಿ ವಕ್ಫ್ ಮಂಡಳಿ, ರೈತರು, ಮಠ, ದೇವಸ್ಥಾನದ ಭೂಮಿಯನ್ನು ತನ್ನದೆಂದು ಹೇಳಿ ನೋಟೀಸ್ ಕಳುಹಿಸುತ್ತಿದೆ. ಇದು ಸಂವಿಧಾನದಲ್ಲಿನ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ. ಹೀಗಾಗಿ ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣಗೊಳಿಸುವಂತೆ ತಮ್ಮಲ್ಲಿ ಕೋರುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆ ಸಂಬಂಧ ಜಂಟಿ ಸದನ ಸಮಿತಿ ರಚಿಸಿದ ಬಳಿಕ ವಕ್ಫ್ ಮಂಡಳಿ ನೋಟೀಸ್ ಕಳುಹಿಸುವುದು, ಆರ್ಟಿಸಿಯಲ್ಲಿ ಹೆಸರು ಬದಲಾಯಿಸುವ ಘಟನೆಗಳು ಹೆಚ್ಚಾಗಿವೆ. ಹೀಗಾಗಿ ವಕ್ಫ್ ಆಸ್ತಿಯ ರಾಷ್ಟ್ರೀಕರಣದಿಂದ ಭೂಮಿಯ ಸಮಾನ ಹಂಚಿಕೆಯಾಗಲಿದೆ ಮತ್ತು ಪಟ್ಟಬದ್ರ ಹಿತಾಸಕ್ತಿಗಳ ಬಳಿ ಭೂಮಿ ಕ್ರೋಢೀಕರಣವಾಗುವುದು ನಿಯಂತ್ರಣವಾಗುತ್ತದೆ. ಹೀಗಾಗಿ ಎಲ್ಲಾ ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸುವಂತೆ ಕೋರುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಸಿ.ಪಿ.ಯೋಗೇಶ್ವರ್ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಆದೇಶ
BIG NEWS : ಭಾರತದ ಮೊದಲ ಅನಲಾಗ್ ಬಾಹ್ಯಾಕಾಶ ಮಿಷನ್ ಆರಂಭಿಸಿದ `ಇಸ್ರೋ’ | ISRO