ಬೆಂಗಳೂರು : ಬೆನ್ನು ನೋವಿನ ಸಮಸ್ಯೆ ಹಿನ್ನೆಲೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನಟ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ನಟ ದರ್ಶನ್ ಬಳ್ಳಾರಿ ಜೈಲಿನ್ನಿಂದ ರಿಲೀಸ್ ಆಗಿದ್ದರು. ಇದೀಗ ಇಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ನಟ ದರ್ಶನವರು ಭೇಟಿ ನೀಡಿದ್ದಾರೆ.
ಹೌದು ಬೆನ್ನು ನೋವಿನ ಚಿಕಿತ್ಸೆಗಾಗಿ ನಟ ದರ್ಶನ್ ಇದೀಗ ಬಿಜಿಎಸ್ ಆಸ್ಪತ್ರೆಗೆ ಬಂದಿದ್ದಾರೆ. ಬೆಂಗಳೂರು ಹೊರಭಾಗದಲ್ಲಿ ಇರುವಂತಹ ಕೆಂಗೇರಿ ಬಳಿ ಇರುವ ಬಿಜಿಎಸ್ ಆಸ್ಪತ್ರೆಗೆ ನಟ ದರ್ಶನ್ ಭೇಟಿ ನೀಡಿದ್ದಾರೆ. ಆಸ್ಪತ್ರೆಗೆ ನಟ ದರ್ಶನ್ ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ನೀಡಲಾಗಿದೆ.ಆಸ್ಪತ್ರೆಯ ಬಳಿ ಒಂದು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಆದರೆ ನಟ ದರ್ಶನವರಿಗೆ ಇದೇ ಮೊದಲನೇ ಬಾರಿ ಚಿಕಿತ್ಸೆಗೆ ಒಳಗಾಗುತ್ತಿಲ್ಲ. ಈ ಮೊದಲು ಕೂಡ ಅವರು ಬೆನ್ನು ನೋವಿನ ಸಮಸ್ಯೆ ಹಿನ್ನೆಲೆ ಚಿಕಿತ್ಸೆ ಪಡೆದಿದ್ದರು. ಹೌದು 2013ರಲ್ಲಿ ಬೃಂದಾವನ ಚಿತ್ರದ ಚಿತ್ರೀಕರಣ ಸಮಯದಲ್ಲಿ ಕುದುರೆಯ ಮೇಲೆ ಹೋಗುತ್ತಿರುವಾಗ ಕುದುರೆ ಮೇಲಿಂದ ಬಿದ್ದಾಗ ಅವರಿಗೆ ತೀವ್ರವಾಗಿ ಬೆನ್ನು ನೋವು ಸಮಸ್ಯೆ ಕಾಡಿತ್ತು. ಬಳಿಕ ಹಲವು ತಿಂಗಳುಗಳ ಕಾಲ ಅವರು ಕುತ್ತಿಗೆಗೆ ಬಟ್ಟೆಯನ್ನು ಕಟ್ಟಿಕೊಂಡಿದ್ದರು.
ಅದಾದ ನಂತರ ಇದೇ ಬಿಜಿಎಸ್ ಆಸ್ಪತ್ರೆಯಲ್ಲಿ ಬೆನ್ನು ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದರು. ಇದೀಗ ನಟ ದರ್ಶನವರು ಎರಡನೇ ಬಾರಿಗೆ ಬೆನ್ನು ನೋವಿನ ಚಿಕಿತ್ಸೆಗೆ ಎಂದು ಬಿಜಿಎಸ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಇವರ ಜೊತೆಗೆ ನಟ ಧನ್ವೀರ್ ಹಾಗೂ ಪತ್ನಿ ವಿಜಯಲಕ್ಷ್ಮಿ ಕೂಡ ಬಿಜೆಪಿ ಆಸ್ಪತ್ರೆಗೆ ಬಂದಿದ್ದಾರೆ. ವೈದ್ಯರನ್ನು ಭೇಟಿ ಮಾಡಿ ಅವರ ಜೊತೆ ಚರ್ಚಿಸಿದ ಬಳಿಕ ಇಂದೇ ದಾಖಲಾಗುತ್ತಾರೋ ಅಥವಾ ಇನ್ನು ಸ್ವಲ್ಪ ದಿನ ಕಳೆದ ಮೇಲೆ ದಾಖಲಾಗುತ್ತಾರೆ ಎಂದು ಕಾದುನೋಡಬೇಕಾಗಿದೆ.