ಚಿಕ್ಕಮಗಳೂರು : ತಾಲೂಕಿನಲ್ಲಿರುವ ಮಾಣಿಕ್ಯಧಾರ ದೇವಿರಮ್ಮ ಬೆಟ್ಟದಲ್ಲಿರುವ ಬಿಂಡಿಗ ದೇವಿರಮ್ಮ ದರ್ಶನಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. ಭಕ್ತರು ಮಾಣಿಕ್ಯಧಾರ ಮಾರ್ಗವಾಗಿ ದೇವಿರಮ್ಮ ಬೆಟ್ಟ ಏರುತ್ತಿದ್ದಾರೆ. ಬಿಂಡಿಗ ದೇವಿರಮ್ಮ ಬೆಟ್ಟಕ್ಕೆ ಬಂದಿದ್ದ ಹತ್ತು ಜನರು ಅಸ್ವಸ್ಥಗೊಂಡಿದ್ದು ಕೂಡಲೇ ಅವರನ್ನು ರಕ್ಷಣೆ ಮಾಡಲಾಗಿದೆ.
ಹೌದು ದೇವಿರಮ್ಮ ಬೆಟ್ಟದಲ್ಲಿರುವ ಬಿಂಡಿಗ ದೇವಿರಮ್ಮ ದರ್ಶನಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. ಭಕ್ತರು ಮಾಣಿಕ್ಯಧಾರ ಮಾರ್ಗವಾಗಿ ದೇವಿರಮ್ಮ ಬೆಟ್ಟ ಏರುತ್ತಿದ್ದಾರೆ. ಬಿಂಡಿಗ ದೇವಿರಮ್ಮ ಬೆಟ್ಟಕ್ಕೆ ಬಂದಿದ್ದ ಮಹಿಳೆ ಅಸ್ವಸ್ಥಗೊಂಡಿದ್ದಾರೆ. ಮಂಗಳೂರು ಮೂಲದ ಜಯಮ್ಮ (55) ಅಸ್ವಸ್ಥಗೊಂಡ ಮಹಿಳೆ. ಪೊಲೀಸರು ಹಗ್ಗದ ಮೂಲಕ ಮಹಿಳೆಯನ್ನು ರಕ್ಷಣೆ ಮಾಡಿದರು. ಈವರೆಗೆ ಅಸ್ವಸ್ಥಗೊಂಡಿದ್ದ 10ಕ್ಕೂ ಅಧಿಕ ಜನರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಇದಕ್ಕೂ ಮುಂಚೆ ಯುವತಿ ಒಬ್ಬಳು ಅಸ್ವಸ್ಥಳಾಗಿದ್ದು, ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಆಕೆಯನ್ನು ರಕ್ಷಿಸಿ ಆಂಬುಲೆನ್ಸ್ ಮುಖಾಂತರ ಆಸ್ಪತ್ರೆಗೆ ಸಾಗಿಸಿದರು. ಅಲ್ಲದೆ ಯುವಕನೋರ್ವ ಬೆಟ್ಟದಿಂದ ಕಾಲು ಜಾರಿ ಬಿದ್ದಿದ್ದ ಪರಿಣಾಮ ಗಂಭೀರವಾಗಿ ಗೊಂಡಿದ್ದಾನೆ. ಕೂಡಲೇ ಆತನನ್ನು 5 ಕಿಲೋಮೀಟರ್ಗಳ ವರೆಗೆ ಹೊತ್ತು ಸಾಗಿ ಚಿಕ್ಕಮಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.