ಬೆಳಗಾವಿ : ರಾಜ್ಯದಲ್ಲಿ ಇದೀಗ ವಕ್ಫ್ ವಿವಾದ ಭುಗಿಲೆದ್ದಿದ್ದು, ಕಳೆದ ಹಲವು ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳ ರೈತರ ಪಹಣಿಗಳಲ್ಲಿ ಅವರ ಜಮೀನು ವಕ್ಫ್ ಅಸ್ತಿಗೆ ಸೇರಿದ್ದು ಎಂದು ನಮೂದಿ ಆಗಿರುವ ಕುರಿತು ರೈತರು ಆತಂಕಕ್ಕೆ ಒಳಗಾಗಿದ್ದರು. ಇದೀಗ ಮಾಜಿ ಸಚಿವರ ಜಮೀನನ್ನೇ ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ನಮೂದಿಸಿದ್ದು, ದೊಡ್ಡ ಸಂಚನಲ ಸೃಷ್ಟಿಸಿದೆ.
ಹೌದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಾಕ್ಸಂಬಾ ಗ್ರಾಮದಲ್ಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಪುತ್ರ ಬಸವ ಪ್ರಭುಗೆ ಸೇರಿದ ಸುಮಾರು 2 ಎಕರೆ 13 ಗುಂಟೆ ಜಮೀನಿನಲ್ಲಿ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಇದರಿಂದ ಸಹಜವಾಗಿ ಅಣ್ಣಾಸಾಹೇಬ್ ಜಿಲ್ಲೆ ಹಾಗೂ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಶಾಕ್ ಗೆ ಒಳಗಾಗಿದ್ದಾರೆ. ಮಾಜಿ ಸಚಿವರ ಕುಟುಂಬಕ್ಕೂ ಇದೀಗ ವಕ್ಫ್ ಶಾಕ್ ನೀಡಿದೆ.
ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ತೋರಿಸುತ್ತಿದೆ ಬಸವ ಪ್ರಭುಗೆ ಸೇರಿದ 2 ಎಕರೆ 13 ಗುಂಟೆ ಜಮೀನಿನಲ್ಲಿ ಪಹಣಿಯಲ್ಲಿ ನಮೂದಾಗಿದೆ. ರೈತರ ಜಮೀನಿನಲ್ಲಿ ಯಕ್ಸಂಬಾದಲ್ಲಿ ಹೀಗೆ ಆಗಿದೆ ಈ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ನಮ್ಮ ಅಜ್ಜನ ಕಾಲದಿಂದಲೂ ನಮ್ಮ ಜಮೀನು ಬಂದಿವೆ. ಆದರೆ ಪಹಣಿಯಲ್ಲಿ ಹೇಗೆ ವಕ್ಫ್ ಎಂದು ನಮೂದಾಗಿದೆ ಗೊತ್ತಾಗುತ್ತಿಲ್ಲ ಎಂದು ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ತಿಳಿಸಿದರು.