ಬೆಂಗಳೂರು : ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಮಿತಿ ಮೀರಿದ್ದು, ಇಂದು ಮತ್ತೊಂದು ರೋಡ್ ರೇಜ್ ಘಟನೆ ನಡೆದಿದೆ.ದೀಪಾವಳಿ ಶಾಪಿಂಗ್ ಮುಗಿಸಿಕೊಂಡು ಮನೆಗೆ ತೆರಳುವಾಗ ದಂಪತಿಗಳ ಕಾರಿನ ಮೇಲೆ ಪುಂಡರು ದಾಳಿ ಮಾಡಿದ್ದು, ಕಾರಿಗೆ ಕಲ್ಲು ಹೊಡೆದ ಪರಿಣಾಮ ಕಾರಿನಲ್ಲಿದ್ದ ದಂಪತಿಯ 5 ವರ್ಷದ ಮಗನಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ನಡೆದಿದೆ.
ಹೌದು ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ತನ್ನ 5 ಹಾಗೂ 11 ವರ್ಷದ ಇಬ್ಬರು ಮಕ್ಕಳ ಜೊತೆಗೆ ದಂಪತಿ ಕಾರಿನಲ್ಲಿ ತೆರಳುತ್ತಿದ್ದರು. ದೀಪಾವಳಿ ಶಾಪಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ ಅನುಪ್ ದಂಪತಿ. ಈ ವೇಳೆ ಕಾರನ್ನು ಅಡಗಟ್ಟಿ ಗ್ಲಾಸ್ ಇಳಿಸುವಂತೆ ಪುಂಡರು ದಂಪತಿಗೆ ಆವಾಜ್ ಹಾಕಿದ್ದಾರೆ. ಈ ವೇಳೆ ಅನೂಪ್ ಜಾರ್ಜ್ ಹಾಗೂ ಜೀಸ್ ದಂಪತಿ ಹೆದರಿಕೊಂಡ ಕಾರಣ ಗ್ಲಾಸು ತೆರೆಯದೆ ಮುಂದೆ ತೆರಳಿದ್ದಾರೆ.
ಬಳಿಕ ಕಾರನ್ನು ಫಾಲೋ ಮಾಡಿದ ಪುಂಡರು ಕಾರಿನ ಮೇಲೆ ಕಲ್ಲು ತೂರಿ ಎಸ್ಕೇಪ್ ಆಗಿದ್ದಾರೆ. ಪುಂಡರು ಕಲ್ಲು ತೂರಿದ್ದರಿಂದ 5 ವರ್ಷದ ಮಗುವಿನ ತಲೆಗೆ ಗಂಭೀರವಾಗಿ ಗಾಯವಾಗಿದೆ. ಈ ವೇಳೆ ಬೈಕ್ ನಲ್ಲಿ ಬಂದಿದ್ದ ಇಬ್ಬರೂ ಪುಂಡರು ಈ ಒಂದು ಕೃತ್ಯ ಎಸಗಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.