ಹಾವೇರಿ : ವಕ್ಫ್ ಆಸ್ತಿ ವಿವಾದದ ಬಿಸಿ ಇದೀಗ ಹಾವೇರಿ ಜಿಲ್ಲೆಗೂ ತಟ್ಟಿದ್ದು, ಹಾವೇರಿ ಜಿಲ್ಲೆಯ ಕಡಕೋಳ ಗ್ರಾಮದಲ್ಲಿ ಮುಸ್ಲಿಂ ಮುಖಂಡರ ಮನೆಯ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ವಕ್ಫ್ ಬೋರ್ಡ್ ಹೆಸರಿನಲ್ಲಿ ಇಂದಿಕರಣಕ್ಕೆ ವಿರೋಧ ವ್ಯಕ್ತಪಡಿಸಿದ್ದು, ವಾಸವಿದ್ದ ಮನೆ ಖಾಲಿ ಮಾಡಿಸಬಹುದು ಎಂಬ ಆತಂಕಕ್ಕೆ ಒಳಗಾಗಿದ್ದ ಜನ ಮುಸ್ಲಿಂ ಮುಖಂಡರ ಮನೆಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.
ಹೌದು ಮುಸ್ಲಿಂ ಮುಖಂಡರ ಮನೆಯ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿರುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಮನೆಗಳ ಮೇಲೆ ಕಲ್ಲುತೂರಾಟ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 15 ಜನರನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಹಾವೇರಿ ಎಸ್ ಪಿ ಅಂಶು ಕುಮಾರ್ ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಡಕೋಳ ಗ್ರಾಮದ ಕೆಲವರ ಮನೆಯ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ನಮಗೆ ಸಂಜೆ 7:30ಕ್ಕೆ ಮಾಹಿತಿ ಬಂತು. ಕಡಕೋಳ ಗ್ರಾಮದಲ್ಲಿ ಗಲಾಟೆಯಲ್ಲಿ ಐವರಿಗೆ ಗಾಯಗಳಾಗಿವೆ. ಗಲಾಟಿಗೆ ಸಂಬಂಧಿಸಿದಂತೆ ದೂರು ಕೊಡಲು ಯಾರು ಸಹ ತಯಾರು ಇಲ್ಲ. ನಾವೇ ಸ್ವಯಂ ಪ್ರೇರಿತ ದೂರದಾಗಲಿಸಿಕೊಳ್ಳುತ್ತೇವೆ ಎಂದರು.
ಹಲ್ಲೆಗೊಳಗಾದವರಿಂದಲೂ ಕೂಡ ಮಾಹಿತಿ ಪಡೆದುಕೊಳ್ಳುತ್ತೇವೆ. ಗಲಾಟಿಗೆ ಸಂಬಂಧಿಸಿದಂತೆ 15 ಜನರನ್ನು ವಶಕ್ಕೆ ಪಡೆದಿದ್ದೇವೆ. ಭದ್ರತೆಗೆ ನಾಲ್ಕು ಕೆ ಎಸ್ ಆರ್ ಪಿ ತುಕಡಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕಡಕೋಳ ಗ್ರಾಮದಲ್ಲಿ ರೂಟ್ ಮಾರ್ಚ್ ಕೂಡ ಮಾಡಲಾಗುತ್ತದೆ ಎಂದು ಎಸ್.ಪಿ ಅಂಶು ಕುಮಾರ್ ತಿಳಿಸಿದರು.