ಬೆಂಗಳೂರು : ರಾಜ್ಯದ ಆದಾಯ ಸಂಗ್ರಹದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದು, ಆರ್ಥಿಕ ವರ್ಷದ 7 ತಿಂಗಳಲ್ಲಿಯೇ ಶೇ.53ರಷ್ಟು ಗುರಿ ಮುಟ್ಟಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯ 1.95 ಲಕ್ಷ ಕೋಟಿ ರು. ಆದಾಯ ಸಂಗ್ರಹದ ಗುರಿ ಹೊಂದಿದ್ದು, ಅಕ್ಟೋಬರ್ ಅಂತ್ಯದ ವೇಳೆಗೆ 1.03 ಲಕ್ಷಕೋರು. ಆದಾಯ ಸಂಗ್ರಹಿಸುವ ಮೂಲಕ ನಿಗದಿತ ಗುರಿಯ ಶೇ. 53ರಷ್ಟು ಸಾಧಿಸಿದಂತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆದಾಯ ಸಂಗ್ರಹದಲ್ಲಿ ಶೇ. 11.2ರಷ್ಟು ಪ್ರಗತಿ ಸಾಧಿಸಿದೆ ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಬಜೆಟ್ ಅನುದಾನ ವೆಚ್ಚ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಳವಾಗಿದೆ. ಅಕ್ಟೋಬರ್ ಅಂತ್ಯಕ್ಕೆ ಶೇ. 46ರಷ್ಟು ಬಜೆಟ್ ಅನುದಾನ ವೆಚ್ಚ ಮಾಡಲಾಗಿದ್ದು, ಕಳೆದ ವರ್ಷ ಈ ಅವಧಿಯಲ್ಲಿ ಶೇ. 42ರಷ್ಟು ಸಾಧನೆ ಮಾಡಲಾಗಿತ್ತು. ಜತೆಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದ್ದ 52 ಸಾವಿರಕೋಟಿ ರು.ಗಳ ಪೈಕಿ ಈವರೆಗೆ 24,235 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ.ಜತೆಗೆ 2024-25ರ ಮೊದಲ ತ್ರೈಮಾಸಿಕ 220 2. (2.2) ಗೂ ಹೆಚ್ಚಿನ ವಿದೇಶಿ ನೇರ ಬಂಡವಾಳ ಹೂಡಿಕೆ ಯನ್ನು ಆಕರ್ಷಿಸಲಾಗಿದೆ. ಆ ಮೂಲಕ ಗುಜರಾತ್ ಹಿಂದಿಕ್ಕಿ ರಾಜ್ಯವು 2ನೇ ಸ್ಥಾನಕ್ಕೇರಿದೆ.
16,750 ಕೋಟಿ ರು. ಆರ್ಥಿಕ ನೆರವು:
ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಇನ್ನಿತರ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಶ್ವ ಬ್ಯಾಂಕ್ ಮತ್ತು ಏಷ್ಯನ್ ಡೆವೆಲಪ್‌ಮೆಂಟ್ ಬ್ಯಾಂಕ್‌ಗಳಿಂದ 16,750 ಕೋಟಿ ರು. ನೆರವು ಪಡೆಯಲಾಗುತ್ತಿದೆ. ಬೆಂಗಳೂರು ವಿಪತ್ತು ನಿರ್ವಹಣೆಗೆ 3,500 ಆಧುನೀಕರಣಕ್ಕೆ 1,200 ಕೋಟಿ ರು., ಕರಾವಳಿ ಕರ್ನಾಟಕದಲ್ಲಿ ಸಾಗರ ಸಂಬಂಧಿ ಆರ್ಥಿಕ ಅಭಿವೃದ್ಧಿಗೆ 600 ಕೋಟಿ ರು.. ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ 3.650 ಕೋಟಿ ರು., ಹವಾಮಾನ ಪೂರಕ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 3,600 ಕೋಟಿ ರು., ಸರ್ಕಾರಿ కారగళ మూలగోళయక్యాని 2,800 ಕೋಟರು.ಹಾಗೂಸಾರ್ವಜನಿಕ ಸಾರಿಗೆಯಲ್ಲಿ 2 1,400 ಕೋಟಿ ರು. ವ್ಯಯಿಸಲು ಯೋಜಿಸಲಾಗಿದೆ.
ಬೆಂಗಳೂರು ಮೂಲಸೌಕಯ್ಯಕ್ಕೆ ₹1.31 ಕೋಟಿ ವೆಚ್ಚ:
ಬೆಂಗಳೂರಿನಲ್ಲಿ 1.31 ಕೋಟಿ ರು. ವೆಚ್ಚದಲ್ಲಿ ಮೂಲಸೌಕರ್ಯ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. 100 ಕಿ.ಮೀ. ಮೇಲ್ಪಸುವೆ ಕಾರಿಡಾರ್ ನಿರ್ಮಾಣಕ್ಕೆ 12 ಸಾವಿರ ಕೋಟಿ ರು., ಮೆಟ್ರೋ 3ನೇ ಹಂತವ ವಿಸ್ತರಿತ ಮಾರ್ಗ (80 ಕಿ.ಮೀ.) ನಿರ್ಮಾಣಕ್ಕೆ 40 ಸಾವಿರ ಕೋಟಿ ರು. ಡಬಲ್ ಡೆಕ್ಕರ್ ಮೆಟ್ರೋ ನಿರ್ಮಾಣಕ್ಕೆ9 ಸಾವಿರ ಕೋಟಿ ರು.. 40. ನಿರ್ಮಾಣಕ್ಕೆ 40 ಸಾವಿರ ಕೋಟಿ ರು., ಪೆರಿಫೆರಲ್ ರಿಂಗ್ ರಸ್ತೆಗೆ ಸಾವಿರ ಕೋಟಿ ರು.. ಸೈಡಕ್ ಯೋಜನೆಗೆ 500 ಕೋಟಿ ರು., ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ಗೆ 27 ಸಾವಿರ ಕೋಟಿ ರು. ವೆಚ್ಚ ಮಾಡಲಾಗುತ್ತಿದೆ.