ತುಮಕೂರು : ಜಾಮೀನು ಮಂಜೂರು ಮಾಡಿದ ನಂತರ ಕೇವಲ 7 ಗಂಟೆಯಲ್ಲಿ ಆರೋಪಿ ದರ್ಶನ್ ಜೈಲಿನಿಂದ ರಿಲೀಸ್ ಆಗಿದ್ದಾರೆ. ಆದರೆ, ದರ್ಶನ್‌ನನ್ನು ಕೊಲೆ ಕೇಸಿನಿಂದ ಪಾರು ಮಾಡಲು ಜೈಲಿಗೆ ಹೋಗಲು ಮುಂದಾಗಿದ್ದ ದರ್ಶನ್ ಗ್ಯಾಂಗ್‌ನ ರವಿಶಂಕರ್ ಕೂಡ ಇಂದೇ ತುಮಕೂರು ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ಹೌದು ರೇಣುಕಾಸ್ವಾಮಿಯನ್ನು ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಸೇರಿದಂತೆ 17 ಜನರ ಪೈಕಿ ಈಗಾಗಲೇ ಹಲವರು ಜೈಲಿನಿಂದ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಇದೇ ಕೇಸಿನ ಎ-8ನೇ ಆರೋಪಿ ರವಿಶಂಕರ್ ಕೂಡ ಇಂದು ತುಮಕೂರು ಜೈಲಿನಿಂದ ಜೈಲಿನಿಂದ ರಿಲೀಸ್ ಆಗಿದ್ದಾನೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A8 ಆರೋಪಿಯಾಗಿದ್ದ ರವಿಶಂಕರ್‌ಗೆ ನ್ಯಾಯಾಲಯದಿಂದ ಜಾಮೀನು ಸಿಕ್ಕಿ 17 ದಿನಗಳು ಕಳೆದಿವೆ. ಆದರೆ, ಜಾಮೀನು ಪಡೆದುಕೊಂಡು ಜೈಲಿನಿಂದ ಹೊರಗೆ ಹೋಗಲು ಇಬ್ಬರು ಶ್ಯೂರಿಟಿದಾರರು ಹಾಗೂ 2 ಲಕ್ಷ ರೂ. ಮೌಲ್ಯದ ಬಾಂಡ್ ಅನ್ನು ನೀಡುವಂತೆ ನ್ಯಾಯಾಲಯದಿಂದ ಷರತ್ತು ವಿಧಿಸಲಾಗಿತ್ತು.
ಕಳೆದ 15 ದಿನಗಳ ಹಿಂದೆಯೆ A8 ಆರೋಪಿ ರವಿಶಂಕರಿಗೆ ಜಾಮೀನು ನೀಡಲಾಗಿತ್ತು ಆದರೆ ನಯಾಾಲಯದ ಷರತ್ತಿನಂತೆ 2 ಲಕ್ಷ ರೂಪಾಯಿ ಬಾಂಡ್ ನೀಡಲು ಅವರ ಕುಟುಂಬದ ಆರ್ಥಿಕ ಸ್ಥಿತಿ ಅಷ್ಟು ಸರಿಯಾಗಿರಲಿಲ್ಲ ಈಗ ಹಿನ್ನೆಲೆಯಲ್ಲಿ ರವಿಶಂಕರ್ ಜೈಲಿನಲ್ಲಿಯೆ ಇದ್ದ.ಇಂದು 17ನೇ ದಿನ ಜಾಮೀನು ಪ್ರಕ್ರಿಯೆಗೆ ಬೇಕಾದ ಎಲ್ಲ ಷರತ್ತುಗಳನ್ನು ಪೂರೈಸಿದ ನಂತರ ಎ-8ನೇ ಆರೋಪಿ ರವಿಶಂಕರ್ ಜೈಲಿನಿಂದ ಹೊರಗೆ ಬಂದಿದ್ದಾನೆ.