ಬೆಂಗಳೂರು: ನಗರದಲ್ಲಿನ ಆಸ್ತಿ ಮಾಲೀಕರಿಗೆ ಬಿಬಿಎಂಪಿಯಿಂದ ಮಹತ್ವದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಅದೇ ಇ-ಖಾತಾ ಅನುಕೂಲಕ್ಕಾಗಿ ಪಾಲಿಕೆಯಿಂದ ಋಣಭಾರ ಪ್ರಮಾಣಪತ್ರವನ್ನು ವಿತರಿಸೋ ಬಗ್ಗೆ ಆಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬಿಬಿಎಂಪಿ ಮಾಹಿತಿ ಹಂಚಿಕೊಂಡಿದ್ದು, ನಾಗರೀಕರು ಅಂತಿಮ ಇ-ಖಾತಾವನ್ನು Online ನಲ್ಲಿ ಪಡೆಯಲು ಅನುಕೂಲವಾಗುವಂತೆ ಈಗ ಪಾಲಿಕೆಯು ಋಣಭಾರ ಪ್ರಮಾಣಪತ್ರ (Encumbrance Certificate) ಅಗತ್ಯವನ್ನು ವಿನಿಯೋಗಿಸಿದೆ ಎಂದಿದೆ.
ಉಪ ನೊಂದಣಾಧಿಕಾರಿ ಕಛೇರಿಯಲ್ಲಿ ನೋಂದಣಿ ಅಥವಾ ಖಾತಾ ವರ್ಗಾವಣೆ ಉದ್ದೇಶಕ್ಕಾಗಿ ಇ-ಖಾತಾ ಅನ್ನು ವಿತರಿಸಲು ಮಾತ್ರ ಋಣಭಾರ ಪ್ರಮಾಣಪತ್ರದ (Encumbrance Certificate) ಅಗತ್ಯವಿರುತ್ತದೆ ಎಂದು ಹೇಳಿದೆ.
ಶೇ. 98 ರಷ್ಟು ಆಸ್ತಿಗಳು ಒಂದು ವರ್ಷದಲ್ಲಿ ಮಾರಾಟ ಅಥವಾ ವರ್ಗಾವಣೆಗೆ ಒಳಪಡುವುದಿಲ್ಲ, ಆದ್ದರಿಂದ ಈ ವ್ಯಕ್ತಿಗಳು ಈಗ ಋಣಭಾರ ಪ್ರಮಾಣಪತ್ರದ (Encumbrance Certificate) ಇಲ್ಲದಂತೆಯೇ ಅಂತಿಮ ಇ-ಖಾತಾವನ್ನು ಪಡೆಯಬಹುದು ಎಂದು ತಿಳಿಸಿದೆ.
ಎಲ್ಲಾ ನಾಗರೀಕರು ತಮ್ಮ ಇತರ ವಿವರಗಳನ್ನು ಅಪ್ಲೋಡ್ ಮಾಡಲು ಮತ್ತು ಅವರ ಅಂತಿಮ ಇ-ಖಾತವನ್ನು https://BBMPeAasthi.karnataka.gov.in ನಿಂದ ಡೌನ್ಲೋಡ್ ಮಾಡಲು ವಿನಂತಿಸಲಾಗಿದೆ.
ಸಿಎಂ ಆಗಿದ್ದಾಗಲೇ ಚನ್ನಪಟ್ಟಣಕ್ಕೆ ಏನೂ ಮಾಡದ ಕುಮಾರಣ್ಣ ಈಗೇನು ಮಾಡುತ್ತಾರೆ: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ