ಬಳ್ಳಾರಿ : ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ ಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಇದರ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮೀ ಬಳ್ಳಾರಿಯ ಕನಕ ದುರ್ಗಮ್ಮ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಟ ದರ್ಶನ್ ಗೆ ಜಾಮೀನು ಮಂಜೂರಾಗುತ್ತಿದ್ದಂತೆ ಬಳ್ಳಾರಿ ಜೈಲಿಗೆ ತೆರಳಿ, ಪತಿಯನ್ನು ಭೇಟಿಯಾದ ವಿಜಯಲಕ್ಷ್ಮೀ ಬಳಿಕ ಬಳ್ಳಾರಿಯ ಕನಕ ದುರ್ಗಮ್ಮ ದೇವಾಲಯಕ್ಕೆ ಆಗಮಿಸಿದರು. ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮನಃಪೂರ್ವಕವಾಗಿ ಪ್ರಾರ್ಥಿಸಿದರು.
ಇದೇ ವೇಳೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರನ್ನು ನೋಡಲು ದೇವಸ್ಥಾನಕ್ಕೆ ಆಗಮಿಸಿದ ದರ್ಶನ್ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಹರಸಾಹಸಪಟ್ಟರು. ಈ ವೇಳೆ ಮಹಿಳಾ ಹೋಂ ಗಾರ್ಡ್ ಸಿಬ್ಬಂದಿ ಒಬ್ಬರು ಕೆಳಗೆ ಬಿದ್ದಿದ್ದರು. ಇದನ್ನು ಲೆಕ್ಕಿಸಿದೆ ಅವರನ್ನು ತುಳಿದುಕೊಂಡು ಹೋಗಿ ದರ್ಶನ ಅಭಿಮಾನಿಗಳು ಮೃಗಿಯ ವರ್ತನೆ ತೋರಿದ್ದಾರೆ.