ಬಳ್ಳಾರಿ : ಸುಮಾರು 131 ದಿನಗಳ ಬಳಿಕ ಜೈಲಿನಿಂದ ನಟ ದರ್ಶನ ಅವರು ಇಂದು ಬಿಡುಗಡೆಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳ ಹರ್ಷೋದ್ಗಾರ ಮುಗಿಲುಮಟ್ಟಿದ್ದು, ಇನ್ನೊಂದೆಡೆ ಬಳ್ಳಾರಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆ.
ಪೊಲೀಸರ ಈ ಒಂದು ನಡೆಗೆ ವ್ಯಾಪಾರಸ್ಥರು ವಿರೋಧಿಸಿದ್ದು , ನಾವು ಬಡ್ಡಿಗೆ ಹಣ ತಂದು ಹೂವಿಗೆ ಹಣ ಹಾಕಿದ್ದೇವೆ.ದಸರಾ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚು ವ್ಯಾಪಾರ ಆಗುತ್ತಿತ್ತು. ದುರ್ಗಾ ಸರ್ಕಲ್ ಬಳಿ ಬೀದಿ ಬದಿಯ ವ್ಯಾಪಾರಿ ಅಂಗಡಿ ಮುಂಗಟ್ಟು ಬಂದ್ ಮಾಡಿಸಿದ್ದಕ್ಕಾಗಿ ಪೊಲೀಸರ ವಿರುದ್ಧ ವ್ಯಾಪಾರಸ್ಥರು ಕೆಂಡಮಂಡಲ ಆಗಿದ್ದಾರೆ.