ಚಿತ್ರದುರ್ಗ: ಜಿಲ್ಲಾ ವಕೀಲರ ಸಂಘ ಹಾಗೂ ವಕೀಲರ ಬಳಗದ ಸಂಯುಕ್ತಾಶ್ರಯದಲ್ಲಿ ದಿನಾಂಕ 31-10-2024ರಂದು ನ್ಯಾಯಾಲಯದ ಮುಂಭಾಗದಲ್ಲಿ ರಾಜ ವೀರ ಮದಕರಿ ನಾಯಕ ಎನ್ನುವಂತ ನಾಯಕವನ್ನು ಪ್ರದರ್ಶ ಮಾಡಲಾಗುತ್ತದೆ ಎಂಬುದಾಗಿ ಮಾಜಿ ಅಧ್ಯಕ್ಷ ಸಿ.ಶಿವು ಯಾದವ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ಈ ಹಿಂದೆ ದಿನಾಂಕ:13-10-2024ರಂದು ನಾಟಕ ಪದರ್ಶನ ಮಾಡಲಾಗುವುದೆಂದು ತಮ್ಮ ಮೂಲಕ ತಿಳಿಸಲಾಗಿತ್ತು. ಆದರೆ ಹವಮಾನ ವೈಪರಿತ್ಯದ ಕಾರಣ ನಾಟಕವನ್ನು ಪ್ರದರ್ಶನ ಮಾಡಲಾಗದೆ ದಿನಾಂಕ:31-10-2024ರಂದು ನಿಗದಿಪಡಿಸಲಾಗಿತ್ತು.
ಈ ನಾಟಕವನ್ನು ನೋಡಲು ಸುಮಾರು 10 ಸಾವಿರ ಜನ ಬರುವ ನಿರೀಕ್ಷೆ ಇರುತ್ತದೆ. ಜಿಲ್ಲಾ ವಕೀಲರಿಂದ ಈಗಾಗಲೇ ಯಶಸ್ವಿಯಾಗಿ 2 ಬಾರಿ ಕುರುಕ್ಷೇತ್ರ ಪೌರಾಣಿಕ ನಾಟಕ ಮತ್ತು 1 ಬಾರಿ ಸಾಮಾಜಿಕ ನಾಟಕವು ಪದರ್ಶನ ಮಾಡಿ ಜನ ಮನ್ನಣೆಯನ್ನು ಗಳಿಸಿರುತ್ತಾರೆ. ಸದರಿ ನಾಟಕವನ್ನು ನೋಡಲು ಎಲ್ಲಾ ತಾಲ್ಲೂಕುಗಳಿಂದ ಮತ್ತು ಹಳ್ಳಿ ಹಳ್ಳಿಗಳಿಂದಲೂ ಜನ ಸಾಗರವು ಹರಿ ಬಂದಿದ್ದನ್ನು ತಾವು ಈ ಹಿಂದೆ ಗಮನಿಸಿರುತ್ತೀರಿ ಎಂದಿದ್ದಾರೆ.
ರಾಜ ವೀರ ಮದಕರಿ ನಾಯಕ ನಾಟಕವು ಚಿತ್ರದುರ್ಗದ ಇತಿಹಾಸವನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಪಾಳೇಗಾರರ ಆಡಳಿತದ ಬಗ್ಗೆ ಬೆಳಕು ಚಲ್ಲುತ್ತದೆ. ಆದ್ದರಿಂದ ಬಹುತೇಕ ಜನರು ನಾಟಕ ಪ್ರದರ್ಶನಕ್ಕೆ ಸಾಗರೂಪಾದಿಯಲ್ಲಿ ಹರಿದು ಬರುವ ನಿರೀಕ್ಷೆ ಇರುತ್ತದೆ. ಈ ವೀರ ಮದಕರಿ ನಾಯಕ ನಾಟಕವನ್ನು ಸಂಜೆ 7:30 ಗಂಟೆಗೆ ಸರಿಯಾಗಿ ಉಚ್ಛ ನ್ಯಾಯಾಲದ ನ್ಯಾಯಮೂರ್ತಿ ಟಿ.ವೆಂಕಟೇಶ್‌ನಾಯ್ಕ ಅವರು ಉದ್ಘಾಟಿಸಲಿದ್ದಾರೆ ಎಂದು ಹೇಳಿದ್ದಾರೆ.
ಈ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ನ್ಯಾಯಾಧೀಶರಾದಂತಹ ರೋಣ್ ವಾಸುದೇವ್, ಮತ್ತು ಸಹಾಯಕ ಜಿಲ್ಲಾ ನ್ಯಾಯಾಧೀಶರಾದ ಎಸ್.ಎನ್.ಕಲ್ಕಣಿ ಮತ್ತು ಗಂಗಾಧರ್.ಸಿ.ಹೆಚ್ ಹಾಗೂ ಜಿಲ್ಲಾಧಿಕಾರಿಗಳಾದ ಟಿ.ವೆಂಕಟೇಶ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಾದ ರಂಜಿತ್ ಕುಮಾರ್ ಬಂಡಾರು ಹಾಗೂ ಕರ್ನಾಟಕ ರಾಜ್ಯ ವಕೀಲ ಪರಿಷತ್ತಿನ ಸದಸ್ಯರಾದ ಗೌತಮ್ ಚಂದ್, ಶ್ರೀನಿವಾಸ್ ಬಾಬು, ರಾಜಣ್ಣ, ದೇವರಾಜು ಭಾಗವಹಿಸಲಿದ್ದಾರೆ. ಸದರಿ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ವೈ.ತಿಪ್ಪೇಸ್ವಾಮಿರವರು ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ವೀರ ಮದಕರಿ ನಾಯಕ ನಾಟಕದ ಸಂಪೂರ್ಣ ಸಾರಥ್ಯವನ್ನು ವಕೀಲರಾದ ಎನ್.ಶರಣಪ್ಪನವರು ವಹಿಸಿದ್ದಾರೆ. ಈ ನಾಟಕದ ವ್ಯವಸ್ಥಾಪಕರು ಮತ್ತು ನಿರ್ದೇಶಕರಾಗಿ ಮಾಜಿ ಅಧ್ಯಕ್ಷರಾದ ಎಸ್.ವಿಜಯ್ ಕುಮಾರ್ ಮತ್ತು ಪಿ.ಆರ್.ವೀರೇಶ್ ಅವರು ನಿರ್ವಹಿಸುತ್ತಾರೆ. ಆದ್ದರಿಂದ ವಕೀಲರು ಪ್ರದರ್ಶನ ಮಾಡುತ್ತಿರುವ ವೀರ ಮದಕರಿ ನಾಯಕ ನಾಟಕ ಪ್ರದರ್ಶನಕ್ಕೆ ಜಿಲ್ಲಾ ಮತ್ತು ಎಲ್ಲಾ ತಾಲ್ಲೂಕು ವಕೀಲರ ಸಂಘದ ಎಲ್ಲಾ ಪದಾಧಿಕಾರಿಗಳು, ವಕೀಲರು ಅವರ ಕುಟುಂಬದವರು ಹಾಗೂ ಜಿಲ್ಲೆಯ ಎಲ್ಲಾ ಕಲಾಭಿಮಾನಿಗಳು, ಕಲಾ ಪೋಷಕರು, ಕಲಾ ಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಐತಿಹಾಸಿಕ ನಾಟಕವನ್ನು ಯಶಸ್ವಿಗೊಳಿಸಬೇಕೆಂದು ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಸಿ.ಶಿವು ಯಾದವ್ ಅವರು ವಿನಂತಿ ಮಾಡಿದ್ದಾರೆ.
ಶಿಗ್ಗಾವಿ ಕ್ಷೇತ್ರಕ್ಕೆ ರಾಜ್ಯ ಸರ್ಕಾರದಿಂದ ನೂರು ಕೋಟಿ ಅನುದಾನ ಬಿಡುಗಡೆ ಹಸಿ ಸುಳ್ಳು: ಬಸವರಾಜ ಬೊಮ್ಮಾಯಿ
BIG NEWS : ದೇವಸ್ಥಾನಗಳಲ್ಲಿ `VIP’ ದರ್ಶನ ಸಮಾನತೆಯ ಹಕ್ಕಿನ ಉಲ್ಲಂಘನೆ : ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆ!