ಬೆಂಗಳೂರು : ದೀಪಾವಳಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ದೀಪಾವಳಿ ಹಬ್ಬಕ್ಕೆ ಮಿಂಟೋ ಆಸ್ಪತ್ರೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ ಎಂದು ಮಿಂಟೋ ಕಣ್ಣಿನ ಆಸ್ಪತ್ರೆಗೆ ನಿರ್ದೇಶಕ ಡಾ.ನಾಗರಾಜ್ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಣ್ಣಿನ ಆಸ್ಪತ್ರೆ ನಿರ್ದೇಶಕ ಡಾ.ನಾಗರಾಜ್, ಕಳೆದ ವರ್ಷ ಪಟಾಕಿ ಸಿಡಿತದಿಂದ 40 ಜನರಿಗೆ ಚಿಕಿತ್ಸೆ ನೀಡಲಾಗಿತ್ತು. 40 ಜನರ ಪೈಕಿ 7-8 ಜನರು ದೃಷ್ಟಿ ಕಳೆದುಕೊಂಡಿದ್ದಾರೆ. ಪಟಾಕಿ ಹಚ್ಚುವಾಗ ಎಚ್ಚರಿಕೆಯಿಂದ ಇರಬೇಕು. ಕಳೆದ ವರ್ಷ 35 ಬೆಡ್ ಗಳನ್ನು ಮೀಸಲಿಡಲಾಗಿತ್ತು. ಆದರೆ ಈ ಬಾರಿ 7 ಬೆಡ್ ಗಳು ಪುರುಷರಿಗೆ, 7 ಬೆಡ್ ಗಳು ಮಹಿಳೆಯರು ಮತ್ತು ಮಕ್ಕಳಿಗೆ ಮೀಸಲಿರಿಸಲಾಗಿದೆ ಎಂದರು.
ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ದಿನದ 24ಗಂಟೆಯು ರೋಗಿಗಳಿಗೆ ಚಿಕಿತ್ಸೆ ಲಭ್ಯವಿದೆ. ಅಗತ್ಯ ವೈದ್ಯರು, ಸಿಬ್ಬಂದಿಗಳಿಗೆ ಒಂದು ವಾರ ರಜೆ ನೀಡಲಾಗಿಲ್ಲ. ಅಗತ್ಯ ಸಿಬ್ಬಂದಿಗಳು ದಿನಪೂರ್ತಿ ಸೇವೆ ನೀಡಲು ಸಜ್ಜಾಗಿದ್ದಾರೆ. ಬೆಂಗಳೂರು ಸೇರಿದಂತೆ ಇನ್ನತರ ಕಡೆಗಳಲ್ಲಿ ಈರೀತಿ ಪಟಾಕಿ ಅವಘಡಗಳು ಸಂಭವಿಸಿದರೆ, ತುರ್ತ ಚಿಕಿತ್ಸೆ ಬೇಕಾದರೆ ಆಸ್ಪತ್ರೆಗೆ ದಾಖಲಾಬಹುದು. ಜೊತೆಗೆ ಸಹಾಯವಾಣಿ- 94808 32430ಗೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದ್ದಾರೆ.
ಪಟಾಕಿ ಸುಟ್ಟ ಗಾಯಕ್ಕೆ ಸಿಂಪಲ್ ಮನೆ ಮದ್ದು
1) ಪಟಾಕಿಯಿಂದ ಸುಟ್ಟ ಗಾಯ ಉಂಟಾದರೆ ಆ ಭಾಗವನ್ನು ತಣ್ಣೀರಿಗೆ ಹಿಡಿಯಿರಿ. ಅಥವಾ ಆ ಪ್ರದೇಶಕ್ಕೆ ಕೋಲ್ಡ್ ಕಂಪ್ರೆಸ್ ಅನ್ನು ಆರಿಸಿಕೊಳ್ಳಿ. ಸುಟ್ಟ ಗಾಯವನ್ನು ತಂಪಾಗಿಸುವುದರಿಂದ ನೋವು, ಊತ ಕಡಿಮೆ ಮಾಡುತ್ತದೆ
2) ತೆಂಗಿನ ಎಣ್ಣೆಯು ಕೂಡ ಪಟಾಕಿ ಸುಟ್ಟ ಗಾಯಕ್ಕೆ ಉಪಶಮನಕಾರಿಯಾಗಿದೆ. ತೆಂಗಿನ ಎಣ್ಣೆಯು ವಿಟಮಿನ್ ಇ ಅನ್ನು ಹೊಂದಿರುತ್ತದೆ, ಇದು ಚರ್ಮದ ಮೇಲೆ ಸುಟ್ಟ ನಂತರದ ಗುರುತುಗಳನ್ನು ನಿಭಾಯಿಸಲು ಅತ್ಯುತ್ತಮವಾಗಿದೆ.
3) ಅಲೋವೆರಾ ಕೂಡ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲು ಉತ್ತಮವಾಗಿದೆ. ಅಲೋವೆರಾದ ಆಂಟಿ-ಬ್ಯಾಕ್ಟೀರಿಯಲ್ ಮತ್ತು ಉರಿಯೂತದ ಗುಣಲಕ್ಷಣಗಳು ಸುಟ್ಟಗಾಯಗಳ ಸುತ್ತ ರಕ್ತಪರಿಚಲನೆಯನ್ನು ಉತ್ತೇಜಿಸುತ್ತದೆ
4) ಸುಟ್ಟ ಗಾಯಗಳಿಗೆ ಜೇನುತುಪ್ಪವನ್ನು ಕೂಡ ಬಳಸಬಹುದಾಗಿದೆ. ಇದು ಮೊದಲ ಹಂತದ ಸುಟ್ಟಗಾಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
5) ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಯಾದರೆ ನೇರವಾಗಿ ಆಸ್ಪತ್ರೆಗೆ ಹೋಗಿ. ಗಾಯಗೊಂಡ ಕಣ್ಣಿಗೆ ಐ ಪ್ಯಾಡ್ ಅಥವಾ ಕ್ಲೀನ್ ಡ್ರೆಸ್ಸಿಂಗ್ ಅನ್ನು ಹಾಕಿಸಿಕೊಳ್ಳಿ. ವೈದ್ಯರನ್ನು ಕೇಳದೆ ಯಾವುದೇ ಕ್ರೀಮ್, ಲೋಷನ್ ಅಥವಾ ಉತ್ಪನ್ನವನ್ನು ಬಳಸಬೇಡಿ. ಅಲ್ಲದೆ, ವೈದ್ಯರು ಸೂಚಿಸಿದ ನಂತರವೇ ನಿವಾರಕಗಳನ್ನು ಬಳಸಬೇಕು.
6) ಸುಟ್ಟ ಪ್ರದೇಶದ ಮೇಲೆ ಸ್ವಚ್ಛ ಮತ್ತು ಒದ್ದೆ ಬಟ್ಟೆ ಹಾಕುವುದು, ನೋವು ಮತ್ತು ಊತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಪ್ರತಿ 5 ರಿಂದ 15 ನಿಮಿಷಗಳ ಕಾಲ ಸುಟ್ಟ ಗಾಯಕ್ಕೆ ನೀವು ಕೋಲ್ಡ್ ಕಂಪ್ರೆಸ್ ಅನ್ನು ಅನ್ವಯಿಸಬಹುದು. ನೀವು ಮತ್ತು ನಿಮ್ಮ ಮಕ್ಕಳು ದೀಪಾವಳಿಯಂದು ಜಾಗ್ರತೆಯಿಂದ ಪಟಾಕಿ ಸಿಡಿಸಿ ಆರೋಗ್ಯಕರವಾಗಿ ದೀಪಾವಳಿ ಆಚರಿಸಿ.