ಬೆಂಗಳೂರು : ವಿಜಯಪುರದಲ್ಲಿ ರೈತರ ಜಮೀನುಗಳು ವಕ್ಫ್ ಆಸ್ತಿ ಎಂದು ತೋರಿಸುತ್ತಿರುವ ವಿಚಾರವಾಗಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಬಿಜೆಪಿ ಪರಿಶೀಲನ ತಂಡವನ್ನು ರಚನೆ ಮಾಡಿದ್ದರು ಇದಕ್ಕೆ ಬಸನಗೌಡ ಪಾಟೀಲ್ ಯತ್ನಾಳ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೆ ಇಂದು ಮತ್ತೆ ಪುನರ್ ರಚನೆ ಮಾಡಿದ್ದಾರೆ.
ಹೌದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಬಿಜೆಪಿ ಪರಿಶೀಲನ ತಂಡ ಪುನರ್ ರಚಿಸಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶದ ಬೆನ್ನಲ್ಲೆ ತಂಡ ಪುನರ್ ರಚನೆ ಮಾಡಲಾಗಿದೆ. ಸಂಸದ ಜಿಗಜಿಣಗಿ ಶಾಸಕ ಯತ್ನಾಳ ಸೇರ್ಪಡೆಗೊಳಿಸಿ ತಂಡ ಪುನರ್ ರಚಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ. ನಾಳೆ ಕಾರಜೋಳ ನೇತೃತ್ವದ ಈ ತಂಡ ವಿಜಯಪುರ ಜಿಲ್ಲೆಗೆ ತೆರಳಲಿದೆ. ಇಂದು ತಂಡಕ್ಕೆ ರಮೇಶ್ ಜಿಗಜಿಣಗಿ, ಶಾಸಕ ಯತ್ನಾಳ್ ಹಾಗೂ ಮಾಜಿ ಜಿಲ್ಲಾಧ್ಯಕ್ಷ ಎಂ.ಬಿ ಜಿರಲಿ ಸೇರ್ಪಡೆ ಮಾಡಿದ ವಿಜಯೇಂದ್ರ.
ನಿನ್ನೆ ಬಿವೈ ವಿಜಯೇಂದ್ರ ಬಿಜೆಪಿಯ ಪರಿಶೀಲನ ತಂಡ ರಚಿಸಿದ್ದರು. ಬಿಜೆಪಿ ತಂಡ ಬಹಿಷ್ಕರಿಸುವುದಾಗಿ ಇಂದು ಬಸವನಗೌಡ ಪಾಟೀಲ ತಿಳಿಸಿದರು. ನಿನ್ನೆ ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ಶಾಸಕರಾದ ಹರೀಶ್ ಪೂಂಜ, ಮಹೇಶ್ ತೆಗಿನಕಾಯಿ, ಮಾಜಿ ಎಂಎಲ್ಸಿ ಅರುಣ್ ಶಹಾಪುರ್ ರೈತ ಮೋರ್ಚ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.