ಬೆಂಗಳೂರು: ದೀಪಾವಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಕೆಳಗಿನ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ತಾತ್ಕಾಲಿಕವಾಗಿ ಜೋಡಿಸಲು ನೈಋತ್ಯ ರೈಲ್ವೆಯು ನಿರ್ಧರಿಸಿದೆ. ವಿವರ ಈ ಕೆಳಗಿನಂತಿವೆ:
ನವೆಂಬರ್ 3 ಮತ್ತು 4 ರಂದು ರೈಲು ಸಂಖ್ಯೆ 17309 ಯಶವಂತಪುರ – ವಾಸ್ಕೋ ಡ ಗಾಮಾ ಡೈಲಿ ಎಕ್ಸ್ಪ್ರೆಸ್ ಮತ್ತು ನವೆಂಬರ್ 2 ಮತ್ತು 3 ರಂದು ರೈಲು ಸಂಖ್ಯೆ 17310 ವಾಸ್ಕೋ ಡ ಗಾಮಾ – ಯಶವಂತಪುರ ಡೈಲಿ ಎಕ್ಸ್ಪ್ರೆಸ್ ರೈಲುಗಳಿಗೆ ಹೆಚ್ಚುವರಿ ತಲಾ ಒಂದು ಎಸಿ-3 ಟೈರ್ ಬೋಗಿಯನ್ನು ಜೋಡಣೆ ಮಾಡಲಾಗುತ್ತಿದೆ.
ನವೆಂಬರ್ 3 ರಂದು ರೈಲು ಸಂಖ್ಯೆ 07339 ಎಸ್ಎಸ್ಎಸ್ ಹುಬ್ಬಳ್ಳಿ-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್ಪ್ರೆಸ್ ಸ್ಪೆಷಲ್ ಮತ್ತು ರೈಲು ಸಂಖ್ಯೆ 17392 ಎಸ್ಎಸ್ಎಸ್ ಹುಬ್ಬಳ್ಳಿ-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್ಪ್ರೆಸ್ ರೈಲುಗಳಿಗೆ ಹೆಚ್ಚುವರಿ ತಲಾ ಒಂದು ಸ್ಲೀಪರ್ ಕ್ಲಾಸ್ ಬೋಗಿಯನ್ನು ಜೋಡಣೆ ಮಾಡಲಾಗುತ್ತಿದೆ.
ನವೆಂಬರ್ 4 ರಂದು ರೈಲು ಸಂಖ್ಯೆ 07340 ಕೆಎಸ್ಆರ್ ಬೆಂಗಳೂರು – ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ಸ್ಪೆಷಲ್, ರೈಲು ಸಂಖ್ಯೆ 06243 ಕೆಎಸ್ಆರ್ ಬೆಂಗಳೂರು – ಹೊಸಪೇಟೆ ಡೈಲಿ ಎಕ್ಸ್ಪ್ರೆಸ್ ಸ್ಪೆಷಲ್ ಮತ್ತು ರೈಲು ಸಂಖ್ಯೆ 06245 ಹೊಸಪೇಟೆ – ಹರಿಹರ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲುಗಳಿಗೆ ಹೆಚ್ಚುವರಿ ತಲಾ ಒಂದು ಸ್ಲೀಪರ್ ಕ್ಲಾಸ್ ಬೋಗಿಯನ್ನು ಜೋಡಿಸಲಾಗುತ್ತಿದೆ.
ನವೆಂಬರ್ 5 ರಂದು ರೈಲು ಸಂಖ್ಯೆ 06244 ಹೊಸಪೇಟೆ – ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್ಪ್ರೆಸ್ ಸ್ಪೆಷಲ್ ಮತ್ತು ರೈಲು ಸಂಖ್ಯೆ 06246 ಹರಿಹರ-ಹೊಸಪೇಟೆ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲುಗಳಿಗೆ ಹೆಚ್ಚುವರಿ ತಲಾ ಒಂದು ಸ್ಲೀಪರ್ ಕ್ಲಾಸ್ ಬೋಗಿಯನ್ನು ಜೋಡಿಸಲಾಗುತ್ತಿದೆ.
ನವೆಂಬರ್ 6 ರಂದು ರೈಲು ಸಂಖ್ಯೆ 17391 ಕೆಎಸ್ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಸ್ಲೀಪರ್ ಕ್ಲಾಸ್ ಬೋಗಿ ಜೋಡಿಸಲಾಗುತ್ತಿದೆ.
ಚನ್ನಪಟ್ಟಣ – ರಾಮನಗರ ನಡುವೆ ಕೈಗಾರಿಕೆ; ಸ್ಥಳೀಯರಿಗೆ ಉದ್ಯೋಗಕ್ಕೆ ಒತ್ತು: HD ಕುಮಾರಸ್ವಾಮಿ ಭರವಸೆ