ಬೆಂಗಳೂರು : ಇದೀಗ ಆನ್ಲೈನ್ನಲ್ಲಿ ಹಣ ಹೂಡಿಕೆ ಮಾಡುವುದು ಅಥವಾ ಸ್ಟಾಕ್ ಮಾರ್ಕೆಟ್ ಹೆಸರಲ್ಲಿ ಹಣ ಹೂಡಿಕೆ ಮಾಡುವುದರಿಂದ ಅನೇಕರು ಲಕ್ಷಾಂತರ ರೂಪಾಯಿಗಳನ್ನು ಹೂಡಿಕೆ ಮಾಡಿ ಬೀದಿಗೆ ಬಂದಿದ್ದು, ಅಲ್ಲದೆ ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ. ಇದೀಗ ಇಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಆನ್ಲೈನ್ ನಲ್ಲಿ ಮದುವೆ ಹೆಸರಿನಲ್ಲಿ ಸೈಬರ್ ವಂಚಕರು ಯುವಕನಿಗೆ ಲಕ್ಷಾಂತರ ರೂಪಾಯಿ ವಂಚನೆ ಎಸಗಿದ್ದಾರೆ.
ಹೌದು ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿ ಪ್ರವೀಣ್ಗೆ 32 ಲಕ್ಷ ರೂಪಾಯಿ ವಂಚನೆ ಎಸಗಲಾಗಿದೆ. ವಂಚಕನೊಬ್ಬ ವಾಟ್ಸಾಪ್ನಲ್ಲಿ ಯುವಕನಿಗೆ ಕಲರ್ ಕಲರ್ AI ಹುಡುಗಿಯರ ಫೋಟೋ ಕಳುಹಿಸಿದ್ದಾನೆ. AI ಫೋಟೋಗಳನ್ನು ವಂಚಕ ಕಳುಹಿಸಿದ್ದ. ಎ ಐ ಫೋಟೋ ನೋಡಿ ಯುವತಿಯ ಜೊತೆಗೆ ಪ್ರವೀಣ್ ಮದುವೆಗೆ ಒಪ್ಪಿದ್ದ. ನಂತರ ಫೋನ್ ಕರೆ ಮಾಡಿ ಇಬ್ಬರೂ ಮದುವೆಗೆ ಒಪ್ಪಿಗೆ ಸೂಚಿಸಿದ್ದರು.
ಸದ್ಯ ಕೇರಳದಲ್ಲಿ ಸ್ಟಾಕ್ ಮಾರ್ಕೆಟ್ನಲ್ಲಿ ಕೆಲಸ ಮಾಡುತ್ತಿದ್ದೇನೆ.ನನ್ನ ಟಾರ್ಗೆಟ್ ಮುಗಿಸಿ ಬೆಂಗಳೂರಿಗೆ ಬಂದು ಭೇಟಿಯಾಗುತ್ತೇನೆ. ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿದರೆ ಒಳ್ಳೆಯ ಲಾಭ ಬರುತ್ತದೆ ಎಂದು ವಂಚಕರ ಮಾತು ನಂಬಿ ಹಂತ ಹಂತವಾಗಿ ಪ್ರವೀಣ್ 32 ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಿದ್ದಾನೆ.ನಂತರ 32 ಲಕ್ಷ ಹಣ ದೋಚಿ ಸೈಬರ್ ಕಳ್ಳರು ಫೋನ್ ಸ್ವಿಚ್ ಆಫ್ ಮಾಡಿದ್ದಾರೆ. ಬಳಿಕ ತಾನು ವಂಚನೆಗೆ ಒಳಗಾಗಿರುವುದನ್ನು ಅರಿತುಕೊಂಡ ಬಳಿಕ ಈ ಕುರಿತು ಬೆಂಗಳೂರಿನ ಪಶ್ಚಿಮ ವಿಭಾಗದ ಸೆನ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ದೂರ ಕಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.