ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಎಸ್ಎಂವಿಟಿ ಬೆಂಗಳೂರಿನಿಂದ ಹೌರಾಗೆ ಏಕಮುಖ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರದ ವ್ಯವಸ್ಥೆ ಮಾಡಲಾಗಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ಸರಿದೂಗಿಸಲು, ನೈಋತ್ಯ ರೈಲ್ವೆ ಅಕ್ಟೋಬರ್ 26 ರಂದು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ದಿಂದ ಹೌರಾಗೆ ಏಕಮುಖ ವಿಶೇಷ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ 06288) ಓಡಿಸಲಿದೆ.
ಈ ರೈಲು ಅಕ್ಟೋಬರ್ 26 ರಂದು ಎಸ್ಎಂವಿಟಿ ಬೆಂಗಳೂರಿನಿಂದ 21:15 ಗಂಟೆಗೆ ಹೊರಟು, ಹೌರಾ ನಿಲ್ದಾಣವನ್ನು ಅಕ್ಟೋಬರ್ 28 ರಂದು 07:30 ಗಂಟೆಗೆ ತಲುಪಲಿದೆ. ಇದು ಧರ್ಮಾವರಂ ಜಂ, ಡೋನ್ ಜಂ, ನಂದ್ಯಾಲ್ ಜಂ, ದಿಗುವಮೆಟ್ಟ, ಗುಂಟೂರು ಜಂ, ವಿಜಯವಾಡ ಜಂ, ರಾಜಮಂಡ್ರಿ, ಕೊಟ್ಟವಲಸ, ವಿಜಯನಗರಂ ಜಂ, ಖುರ್ದಾ ರೋಡ್ ಜಂ, ಭುವನೇಶ್ವರ, ಕಟಕ್, ಭದ್ರಾಕ್ ಮತ್ತು ಖರಗ್ಪುರ ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಈ ರೈಲು 22 ಬೋಗಿಗಳನ್ನು ಹೊಂದಿರುತ್ತದೆ.
ಡಾನಾ ಚಂಡಮಾರುತದ ಎಫೆಕ್ಟ್: ಡುರೊಂಟೊ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದು
ಡಾನಾ ಚಂಡಮಾರುತದ ಕಾರಣಕ್ಕಾಗಿ ಅಕ್ಟೋಬರ್ 26 ರಂದು ಹೌರಾದಿಂದ ಎಸ್ಎಂವಿಟಿ ಬೆಂಗಳೂರಿಗೆ (ರೈಲು ಸಂಖ್ಯೆ 12245) ಹೊರಡುವ ಡುರೊಂಟೊ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.
‘ಸಾಗರದ ತಾಲ್ಲೂಕು ಅರಣ್ಯ ಇಲಾಖೆ ನಿರ್ದೇಶಕ’ರ ಸ್ಥಾನಕ್ಕೆ ‘ಸಂತೋಷ್ ಕುಮಾರ್.ಎನ್’ ಸ್ಪರ್ಧೆ