ಬೆಂಗಳೂರು: ನಿರ್ಧಿಷ್ಟಪಡಿಸಿದ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಯಾವುದೇ ಶಿಕ್ಷಕರು ಸಂಘ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅಥವಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ಪದಾಧಿಕಾರಿಯಾಗಲು ಅವಕಾಶವಿಲ್ಲದಿರುವ ಎಂಬುದಾಗಿ ಶಾಲಾ ಶಿಕ್ಷಣ ಇಲಾಖೆ ಸ್ಪಷ್ಟ ಪಡಿಸಿದೆ. ಒಂದು ವೇಳೆ ಈ ನಿಯಮವನ್ನು ಮೀರಿದ್ರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಅಧಿಕೃತ ಜ್ಞಾಪನ ಹೊರಡಿಸಿದ್ದು, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ] ಅಧಿನಿಯಮ-2020 [2020ರ ಕರ್ನಾಟಕ ಅಧಿನಿಯಮ ಸಂಖ್ಯೆ: 04) ಸೆಕ್ಷನ್-8(1) ರಲ್ಲಿ ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ] ನಿಯಮಗಳು-2020ರ ನಿಯಮ-15ರಲ್ಲಿ ಕಲ್ಪಿಸಿರುವ ಅವಕಾಶಗಳಂತೆ ನಿರ್ಧಿಷ್ಟಪಡಿಸಿದ ಹುದ್ದೆಗಳಿಗೆ (Specified post) ಲಿಖಿತ ಪರೀಕ್ಷೆ ನಡೆಸುವ ಮೂಲಕ ಅಯ್ಕೆಯಾದ ಶಿಕ್ಷಕರನ್ನು ಕೌನ್ಸಿಲಿಂಗ್ ಮೂಲಕ ನಿರ್ಧಿಷ್ಟಪಡಿಸಿದ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಲಾಗಿರುತ್ತದೆ. ಈ ಸಂಬಂಧ ಉಲ್ಲೇಖಿತ-3 ರಲ್ಲಿ ಹೊರಡಿಸಲಾಗಿರುವ ಅಧಿಸೂಚನೆಯ (ಪುಟ ಸಂ-2 ಕ್ರ.ಸಂ-8, ಪುಟ ಸಂ4 ಕ್ರ.ಸಂ-9 ಮತ್ತು ಪುಟ ಸಂಖ್ಯೆ-, ಕ್ರಸಂ-13 ರಲ್ಲಿ) ರ ಸಕಾರ ಹುದ್ದೆಗಳಿಗೆ ಆಯ್ಕೆ ಬಯಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಂಘ ಸಂಸ್ಥೆ ಮತ್ತು ಇತರೆ ಯಾವುದೇ ಸಹಕಾರ ಸಂಘ/ಸಂಸ್ಥೆಗಳ ಚುನಾಯಿತ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ಪದಾಧಿಕಾರಿಗಳು ಸೇರಿದಂತೆ ಯಾವುದೇ ಹುದ್ದೆಯನ್ನು ಹೊಂದಿರತಕ್ಕದಲ್ಲ. ಒಂದು ವೇಳೆ ಹೊಂದಿದ್ದಲ್ಲಿ ಆ ಹುದ್ದೆಯನ್ನು ತ್ಯಜಿಸಿ ಆ ಬಗ್ಗೆ ಲಿಖಿತ ಮುಚ್ಚಳಿಕೆಯನ್ನು ನೀಡಿದ ನಂತರ ಅರ್ಜಿಯನ್ನು ಸಲ್ಲಿಸತಕ್ಕದ್ದು, ಒಂದು ಬಾರಿ ನಿರ್ದಿಷ್ಟಪಡಿಸಿದ ಹುದ್ದೆಯ ಕರ್ತವ್ಯಕ್ಕೆ ಹಾಜರಾದ ನಂತರ ಮೇಲಿನ ಯಾವುದೇ ಹುದ್ದೆಯನ್ನು ಹೊಂದಲು ಅವಕಾಶವಿರುವುದಿಲ್ಲ. ಎಂದು ಸ್ಪಷ್ಟಪಡಿಸಿದೆ ಎಂದಿದ್ದಾರೆ.
ಆದಾಗ್ಯೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿನ ಸಿ.ಆರ್.ಪಿ/ಬಿ.ಆರ್.ಪಿ/ಇ.ಸಿ.ಒ ಗಳು ಪ್ರಸ್ತುತ ಅಧಿಸೂಚಿಸಲಾಗಿರುವ ಸರ್ಕಾರಿ ನೌಕರರ ಚುನಾವಣೆಯಲ್ಲಿ ಮತ್ತು ಪಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಪರಿಗಣಿಸಲಾಗಿದೆ. ಸಲ್ಲಿಸುತ್ತಿದ್ದು ಈ ಗಂಭೀರವಾಗಿ ವಿಚಾರವನ್ನು ಬಹಳ ಇದರಿಂದ ರಾಜ್ಯ ಕಛೇರಿಯಿಂದ ಹೊರಡಿಸಲಾಗಿರುವ ಅಧಿಸೂಚನೆಯಲ್ಲಿರುವ ಷರತ್ತುಗಳ ಉಲ್ಲಂಘನೆಯಾಗುತ್ತಿದ್ದು ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಕೋರಿ ಉಲ್ಲೇಖಿತ-2 ರಲ್ಲಿ ಅಧ್ಯಕ್ಷರು ಲಿಪಿಕ ನೌಕರರ ಸಂಘ ಇವರು ಮನವಿ ಸಲ್ಲಿಸಿರುತ್ತಾರೆ ಎಂದು ಹೇಳಿದೆ.
ಈ ಹಿನ್ನೆಲೆಯಲ್ಲಿ, ಸಮಗ್ರ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ರೂಪಿತವಾಗಿರುವ ಸಿ.ಆರ್.ಪಿ, ಬಿ.ಆರ್.ಪಿ. ಶಿಕ್ಷಣ ಸಂಯೋಜರು, ಐ.ಇ.ಆರ್.ಟಿ ಬಿ.ಐ.ಇ.ಆರ್.ಟಿ ಮತ್ತು ಇನ್ನಿತರೆ ನಿರ್ಧಿಷ್ಟಪಡಿಸಿದ ಹುದ್ದೆಗಳು ಯೋಜನೆಯ ಕಾರ್ಯ ಚಟುವಟಿಕೆಗಳನ್ನು ಕ್ಲಸ್ಟರ್ ಹಾಗೂ ಬ್ಲಾಕ್ ಹಂತಗಳಲ್ಲಿ ಕಾರ್ಯರೂಪಕ್ಕಿಳಿಸಿ ಅನುಷ್ಟಾನಗೊಳಿಸುವ ಮತ್ತು ಮೇಲ್ವಿಚಾರಣೆ ನಡೆಸುವ ಗುರುತರವಾದ ಜವಾಬ್ದಾರಿಯನ್ನು ಹೊಂದಿರುತ್ತದೆ. ಸದರಿ ಹುದ್ದೆಗಳಿಗೆ ಸ್ಥಳ ನಿಯುಕ್ತಿಯಾದವರು ಸರ್ಧಾತ್ಮಕ ಪರೀಕ್ಷೆಯ ಮೂಲಕ ಸ್ವ-ಇಚ್ಚೆಯಿಂದ ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡಿರುತ್ತಾರೆ. ಇವರ ಕರ್ತವ್ಯದ ಅವಧಿ ಕನಿಷ್ಟ-3 ವರ್ಷ ಹಾಗೂ ಗರಿಷ್ಟ-5 ವರ್ಷಗಳಾಗಿರುತ್ತದೆ. ಈ ನೌಕರರು ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇಲಾಖೆಯ ಪ್ರೋತ್ಸಾಹದಾಯಕ ಯೋಜನೆಯ ಮತ್ತು ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಕ್ಲಸ್ಟರ್ ಮತ್ತು ಬ್ಲಾಕ್ ಹಂತಗಳಲ್ಲಿ ಅನುಷ್ಠಾನಗೊಳಿಸುವುದರ ಜೊತೆಯಲ್ಲಿ ಇಲಾಖೆಯ ಇನ್ನಿತರೆ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುವ ಹೊಣೆಗಾರಿಕೆ ಇರುತ್ತದೆ ಎಂದು ಹೇಳಿದೆ.
ಆದ್ದರಿಂದ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಇನ್ನಿತರೆ ಯಾವುದೇ ಸಂಘ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು, ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸುವುದು ಮತ್ತು ಯಾವುದೇ ಸಂಘ ಸಂಸ್ಥೆಯ ಪದಾಧಿಕಾರಿ/ನಾಮ ನಿರ್ದೇಶಿತ ಸದಸ್ಯ, ಪದಾಧಿಕಾರಿಯಾಗಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ. ಅರ್ಹತೆ ಇದ್ದಲ್ಲಿ ಕೇವಲ ಚುನಾವಣೆಯಲ್ಲಿ ಮತದಾನ ಮಾಡಲು ಮಾತ್ರ ಅವಕಾಶವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಲ್ಲಿ ‘ಅತಿವೃಷ್ಠಿ ಸಮಸ್ಯೆ’ಗಳ ಶಾಶ್ವತ ಪರಿಹಾರಕ್ಕೆ ‘ಡಿಸಿಎಂ ಡಿ.ಕೆ.ಶಿವಕುಮಾರ್’ ಮಹತ್ವದ ಕ್ರಮ
BREAKING: ರಾಜ್ಯದ ‘ಅರಣ್ಯ ಭೂಮಿ ಸಾಗುವಳಿ ರೈತ’ರಿಗೆ ‘ಸಚಿವ ಈಶ್ವರ್ ಖಂಡ್ರೆ’ ಗುಡ್ ನ್ಯೂಸ್
ರಾಜ್ಯದಲ್ಲೊಬ್ಬ ಅಪರೂಪದ ‘ಡೊಳ್ಳು ಕಲಾವಿದ’: ಇವರ ಸಾಧನೆ ಕೇಳಿದ್ರೆ ‘ನೀವೇ ಶಾಕ್’ ಆಗ್ತೀರಿ