ಕೊಪ್ಪಳ : ಗಂಗಾವತಿ ತಾಲ್ಲೂಕಿನ ಸಾಣಾಪುರ ಗ್ರಾಮದ ಕೆರೆಯಲ್ಲಿ ಬುಧವಾರ ಈಜಲು ಹೋದಾಗ ಕಾಲು ಜಾರಿ ಬಿದ್ದ ಇಸ್ರೇಲ್ ಪ್ರಜೆಯನ್ನು ಸಹ ಪ್ರವಾಸಿಗರು ರಕ್ಷಿಸಿದ್ದಾರೆ.
ಸಾವಿನ ದವಡೆಯಿಂದ ಪಾರಾದ ಇಸ್ರೇಲ್ ದೇಶದ ಜೇರುಸೆಲಂನ ಲೇವಿಅಮಿಟ್ ತನ್ನ ಸ್ನೇಹಿತರ ಜೊತೆಗೆ ಹಂಪಿ ಹಾಗೂ ಆನೆಗೊಂದಿ ಭಾಗದಲ್ಲಿ ಪ್ರವಾಸಕ್ಕೆ ಬಂದಿದ್ದರು. ಪ್ರವಾಸಿ ತಾಣದಲ್ಲಿ ಸುತ್ತಾಡಿದ ಬಳಿಕ ಆರಂಭದಲ್ಲಿ ಕೆರೆಯ ದಡದಲ್ಲಿ ಸ್ವಲ್ಪ ನೀರಿದ್ದ ಜಾಗದಲ್ಲಿ ಸ್ನಾನ ಮಾಡುತ್ತಿದ್ದರು.
ಪ್ರವಾಸಿ ತಾಣದಲ್ಲಿ ಸುತ್ತಾಡಿದ ಬಳಿಕ ಆರಂಭದಲ್ಲಿ ಕೆರೆಯ ದಡದಲ್ಲಿ ಸ್ವಲ್ಪ ನೀರಿದ್ದ ಜಾಗದಲ್ಲಿ ಸ್ನಾನ ಮಾಡುತ್ತಿದ್ದಾಗ ಕಾಲು ಜಾರಿ ಕೆರೆಯ ಆಳಕ್ಕೆ ಹೋಗಿದ್ದಾರೆ. ನೀರಿನಲ್ಲಿ ಮುಳುಗಿ ಏಳುತ್ತಿರುವುದನ್ನು ಗಮನಿಸಿದ ಸಹ ಪ್ರವಾಸಿಗರು ರಕ್ಷಣೆ ಮಾಡಿದರು.