ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು ಬ್ರಿಟಿಷ್ ಕೌನ್ಸಿಲ್ ಸಹಯೋಗದಲ್ಲಿ ಇಂಗ್ಲಿಷ್ ಪ್ರಿಮಿಯರ್ ಲೀಗ್ ಸ್ಪೋರ್ಟ್ಸ್ ತರಬೇತುದಾರರಿಂದ ಕರ್ನಾಟಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಕರಿಗೆ ಕ್ರೀಡಾ ಮತ್ತು ಲೈಫ್ ಸ್ಕಿಲ್ಸ್ ತರಬೇತು ನೀಡುವ ಪ್ರೀಮಿಯರ್ ಲೀಗ್ ಪ್ರೈಮರಿ ಸ್ಟಾರ್ಸ್ ಪ್ರಾಜೆಕ್ಟ್ ಕಾರ್ಯಕ್ರಮಕ್ಕೆ ಬುಧವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ವತಃ ಕ್ರೀಡಾಪಟುವಾಗಿ ನಾನು ಕ್ರೀಡೆಗೆ ಮಹತ್ವ ನೀಡುತ್ತೇನೆ. ನಮ್ಮ ಸ್ಟುಡಿಯೋದಲ್ಲಿ ದೊಡ್ಡ ಪರೆದೆಯಲ್ಲಿ ಪ್ರಮುಖ ಫುಟ್ಬಾಲ್ ಪಂದ್ಯಾವಳಿಗಳ ವೀಕ್ಷಿಸುವ ಅಭ್ಯಾಸವಿದೆ. ಪ್ರೀಮಿಯರ್ ಲೀಗ್ ತರಬೇತುದಾರರಿಂದ ನಮ್ಮ ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ನಮ್ಮ ಇಲಾಖೆಯಲ್ಲಿ ಯಶಸ್ವಿಗೊಳಿಸಲಾಗುವುದು ಎಂದರು.
ಕೊಕೊ, ಕಬಡ್ಡಿ ಮುಂತಾದ ಪ್ರಾಚೀನ ಕ್ರೀಡೆಗಳು ಸಹ ಪುಟ್ಬಾಲ್ ಕ್ರೀಡೆಯಂತೆ ಬೆಳೆಯಬೇಕು. ಪ್ರಾಚೀನ ಕ್ರೀಡೆಗಳನ್ನು ನಾವು ಉಳಿಸಬೇಕು. ಇವುಗಳನ್ನು ಮರೆಯಲಾಗುತ್ತಿದೆ. ಶಾಲಾ ಹಂತದಲ್ಲಿ ಮಕ್ಕಳಿಗೆ ಈ ಕ್ರೀಡೆಗಳನ್ನು ಪರಿಚಯಿಸಲಾಗುತ್ತಿದೆ. ಈ ಆಟಗಳನ್ನು ಯಾವುದೇ ವಯಸ್ಸಿನಲ್ಲಿ ಆಡಬಹುದು ಎಂದರು.
ಕ್ರೀಡೆಗಳಲ್ಲಿ ನಾವು ತೊಡಗಬಹುದು ಆದರೆ ಕ್ರೀಡೆಗೆ ವೃತ್ತಿಪರತೆಯ ಅಗತ್ಯವಿದೆ. ಪ್ರಿಮಿಯರ್ ಲೀಗ್ ಪ್ರೈಮರಿ ಸ್ಟಾರ್ಸ್ ಕಾರ್ಯಕ್ರಮದಿಂದ ಎರಡು ದೇಶಗಳ ನಡುವೆ ಸ್ನೇಹ-ಸಂಬಂಧ ಇನ್ನೂ ಸದೃಡವಾಗುತ್ತದೆ ಎಂದರು.
ಮಕ್ಕಳಿಗೆ 6 ವರ್ಷದಿಂದಲೇ ತರಬೇತಿ ನೀಡಲು ಆರಂಭಿಸಲಾಗುತ್ತದೆ. ನಮ್ಮ ಶಾಲಾ ಶಿಕ್ಷಕರು ಆಟದಲ್ಲಿ ತೊಡಗುತ್ತಾರೆ ಎಂಬುದು ವಿಶೇಷ. ಶಿಕ್ಷಕರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಲು ನಾವು ಮುಕ್ತ ಮನಸ್ಸು ಹೊಂದಿದ್ದೇವೆ ಎಂದರು.
ನಮ್ಮ ತಂದೆಯವರಾದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು 76ನೇ ವಯಸ್ಸಿನ ವರೆಗೂ ಶಟಲ್ ಬ್ಯಾಡ್‌ಮಿಂಟನ್ ಆಡುತ್ತಿದ್ದರು. ಆನಂತರವೂ ಅವು ಸ್ವಿಮಿಂಗ್ ಮಾಡುತ್ತಿದ್ದರು ಎಂದು ಸ್ಮರಿಸಿಕೊಂಡರು.
ಬ್ರಿಟಿಷ್ ಕೌನ್ಸಿಲ್ ಸದುದ್ದೇಶ ಇಟ್ಟುಕೊಂಡು ಕೈಗೊಂಡಿರುವ ಈ ಕಾರ್ಯಕ್ರಮವನ್ನು ಕರ್ನಾಟಕದಲ್ಲಿ ಯಶಸ್ವಿಗೊಳಿಸಲು ಎಲ್ಲಾ ರೀತಿಯ ಕ್ರಮವಹಿಸಲಾಗುವುದು ಎಂದು ಸಚಿವರು ಹೇಳಿದರು.
ಪ್ರೀಮಿಯರ್ ಲೀಗ್ ಪ್ರೈಮರಿ ಸ್ಟಾರ್ಸ್ ಪ್ರಾಜೆಕ್ಟ್ ಅಂಗವಾಗಿ ಆಪರೇಷನಲ್ ಅಲೈಯನ್ಸ್ ಒಪ್ಪಂದಕ್ಕೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಡಾ ಕೆ.ವಿ.ತ್ರಿಲೋಕ್‌ಚಂದ್ರ ಮತ್ತು ಬ್ರಿಟಿಷ್ ಕೌನ್ಸಿಲ್‌ನ ದಕ್ಷಿಣ ಭಾರತ ನಿರ್ದೇಶಕರಾದ ಜನಕ ಪುಷ್ಪನಾಥನ್ ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ಅವರ ಸಮ್ಮುಖದಲ್ಲಿ ಸಹಿ ಮಾಡಿದರು.
ಶಿಕ್ಷ ಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಶಿಕ್ಷಣ ಇಲಾಖೆ ಆಯುಕ್ತರಾದ ಡಾ. ಕೆ ವಿ. ತ್ರಿಲೋಕ್ ಚಂದ್ರ ಬ್ರಿಟಿಷ್ ಡೆಪ್ಯೂಟಿ ಹೈ ಕಮಿಷನ್‌ನ ಡೆಪ್ಯೂಟಿ ಹೆಡ್ ಆಫ್ ಮಿಷನ್ ಜೇಮ್ಸ್ ಗಾಡ್‌ಬೆರ್, ಬ್ರಿಟಿಷ್ ಕೌನ್ಸಿಲ್‌ನ ಸೌತ್ ಇಂಡಿಯಾ ನಿರ್ದೇಶಕರಾದ ಜನಕ ಪುಷ್ಪನಾಥನ್, ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕರಾದ ಎಂ.ಕೂರ್ಮರಾವ್, ಮತ್ತಿತರರು ಉಪಸ್ಥಿತರಿದ್ದರು.
IND vs GER: ಜರ್ಮನಿ ವಿರುದ್ಧ ಭಾರತದ ಹಾಕಿ ತಂಡಕ್ಕೆ 2-0 ಅಂತರದಿಂದ ಭರ್ಜರಿ ಗೆಲುವು
ಶಿವಮೊಗ್ಗ: ಅ.25ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut