ನವದೆಹಲಿ : ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಷ್ಯಾಕ್ಕೆ ಆಗಮಿಸಿದ್ದಾರೆ. 16ನೇ ಬ್ರಿಕ್ಸ್ ಶೃಂಗಸಭೆ ಕಜಾನ್ ನಲ್ಲಿ ನಡೆಯುತ್ತಿದೆ. ಕಜಾನ್’ನಲ್ಲಿ ಶೃಂಗಸಭೆಗೆ ಮೊದಲು ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆತ್ಮೀಯವಾಗಿ ಭೇಟಿಯಾದರು. ಪುಟಿನ್ ಅವರೊಂದಿಗೆ ಪ್ರಧಾನಿ ಮೋದಿ ಕೈಕುಲುಕಿದರು. ನಂತ್ರ ಉಭಯ ನಾಯಕರ ನಡುವೆ ದ್ವಿಪಕ್ಷೀಯ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಮಾಧ್ಯಮಗೋಷ್ಠಿಯಲ್ಲಿ ಪ್ರಧಾನಿ ಮೋದಿ ರಷ್ಯಾ-ಉಕ್ರೇನ್ ಯುದ್ಧವನ್ನು ಉಲ್ಲೇಖಿಸಿದರು. ಪುಟಿನ್ ಅವರ ಮುಂದೆ ಶಾಂತಿಯ ವಿಷಯವನ್ನ ಅವರು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಆತ್ಮೀಯ ಆತಿಥ್ಯಕ್ಕಾಗಿ ರಷ್ಯಾಕ್ಕೆ ಧನ್ಯವಾದ ಅರ್ಪಿಸಿದರು. “ಭಾರತವು ಕಜಾನ್ ನಗರದೊಂದಿಗೆ ಐತಿಹಾಸಿಕ ಸಂಬಂಧವನ್ನು ಹೊಂದಿದೆ. “ಕಳೆದ ಕೆಲವು ತಿಂಗಳುಗಳಲ್ಲಿ ನಾನು ರಷ್ಯಾಕ್ಕೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ. ಈ ವರ್ಷದ ಜುಲೈನಲ್ಲಿ ನಾನು ಮಾಸ್ಕೋದಲ್ಲಿ ಅಧ್ಯಕ್ಷ ಪುಟಿನ್ ಅವರನ್ನ ಭೇಟಿಯಾಗಿದ್ದೆ. ಉಭಯ ದೇಶಗಳ ನಡುವಿನ ಈ ಆತ್ಮೀಯತೆಯು ಆಳವಾದ ಸಂಬಂಧವನ್ನ ಪ್ರತಿಬಿಂಬಿಸುತ್ತದೆ. ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ಮತ್ತಷ್ಟು ಬಲಗೊಂಡಿದೆ” ಎಂದರು.
ಮಾತುಕತೆಯು ರಷ್ಯಾ-ಉಕ್ರೇನ್ ಬಿಕ್ಕಟ್ಟು ಪರಿಹಾರ.!
“ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಸಂಬಂಧಿಸಿದಂತೆ ನಾನು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಯಾವುದೇ ಬಿಕ್ಕಟ್ಟು ಅಥವಾ ಸಮಸ್ಯೆಯನ್ನು ಪರಸ್ಪರ ಮಾತುಕತೆಯ ಮೂಲಕ ಪರಿಹರಿಸಬೇಕು ಎಂದು ಭಾರತ ನಂಬುತ್ತದೆ ಎಂದು ನಾನು ಈ ಹಿಂದೆಯೇ ಹೇಳಿದ್ದೇನೆ. ಭಾರತವು ಶಾಂತಿ ಮತ್ತು ಸ್ಥಿರತೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಮ್ಮ ಎಲ್ಲಾ ಪ್ರಯತ್ನಗಳು ಮಾನವೀಯತೆಗೆ ಆದ್ಯತೆ ನೀಡುವುದು. ಮುಂಬರುವ ದಿನಗಳಲ್ಲಿ, ಭಾರತವು ಇದಕ್ಕಾಗಿ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಸಿದ್ಧವಾಗಿದೆ ಎಂದರು.
BIG UPDATE: ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಬೃಹತ್ ಕಟ್ಟಡ ಕುಸಿತ : ಅವಶೇಷಗಳಡಿ 16 ಕಾರ್ಮಿಕರು ಸಿಲುಕಿರುವ ಶಂಕೆ!
ಎಸಿ ರೈಲುಗಳಲ್ಲಿನ ‘ಕಂಬಳಿ’ಗಳನ್ನ ತಿಂಗಳಿಗೊಮ್ಮೆ ತೊಳೆಯಲಾಗುತ್ತದೆ : ‘RTI’ ಶಾಕಿಂಗ್ ಮಾಹಿತಿ
ಗದಗ : ಸಾಲಬಾಧೆ, ಕೌಟುಂಬಿಕ ಕಲಹಕ್ಕೆ ಮನನೊಂದ ಯುವಕ : ತುಂಗಭದ್ರಾ ನದಿಗೆ ಜಿಗಿದು ಆತ್ಮಹತ್ಯೆ!