Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : 16 ಬಾರಿ ಮಚ್ಚಿನಿಂದ ಕೊಚ್ಚಿ, ಶವದ ಮೇಲೆ ಕಾಲಿಟ್ಟು ಪೋಸ್ ಕೊಟ್ಟ ಹಂತಕ : ಬೆಚ್ಚಿಬಿದ್ದ ಬೆಳಗಾವಿ ಜನತೆ!

03/02/2026 12:21 PM

BREAKING: ‘ನಿಯಮ ಪಾಲಿಸಿ ಇಲ್ಲವೇ ಭಾರತ ಬಿಟ್ಟು ತೊಲಗಿ’: WhatsAppಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ!

03/02/2026 12:17 PM

BREAKING: ಮಾಜಿ ಸ್ಪೀಕರ್, ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

03/02/2026 12:11 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರು ನಗರ ವ್ಯಾಪ್ತಿಯಲ್ಲೇ 1 ವರ್ಷದಲ್ಲಿ ‘103 ಎಕರೆ ಅರಣ್ಯ’ ಒತ್ತುವರಿ ತೆರವು: ಸಚಿವ ಈಶ್ವರ್ ಖಂಡ್ರೆ
KARNATAKA

ಬೆಂಗಳೂರು ನಗರ ವ್ಯಾಪ್ತಿಯಲ್ಲೇ 1 ವರ್ಷದಲ್ಲಿ ‘103 ಎಕರೆ ಅರಣ್ಯ’ ಒತ್ತುವರಿ ತೆರವು: ಸಚಿವ ಈಶ್ವರ್ ಖಂಡ್ರೆ

By kannadanewsnow0921/10/2024 7:33 PM

ಬೆಂಗಳೂರು : ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರ ಸ್ಪಷ್ಟ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿಯಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದ್ದು ಮತ್ತೆರೆಡು ಎಕರೆ ಅರಣ್ಯ ಭೂಮಿ ಮರು ವಶಕ್ಕೆ ಪಡೆಯಲಾಗಿದೆ.

ಯಲಹಂಕ ಬಳಿಯ ಮಾರಸಂದ್ರದ ಗಸ್ತು ಸರ್ವೆ ನಂ.182ರಲ್ಲಿ ಒತ್ತುವರಿ ಮಾಡಲಾಗಿದ್ದ 2 ಎಕರೆ 10 ಗುಂಟೆ ಅರಣ್ಯ ಜಮೀನನ್ನು ತೆರವು ಮಾಡಿ ಅಲ್ಲಿ ಸ್ಥಳೀಯ ಜಾತಿಯ ಸಸಿಗಳನ್ನು ನೆಟ್ಟು ಅರಣ್ಯ ಬೆಳೆಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಭೈರಾರೆಡ್ಡಿ ಎಂಬುವವರು ಮಾರಸಂದ್ರದ ಮೀಸಲು ಅರಣ್ಯ ಸರ್ವೆ ನಂ182ರಲ್ಲಿ ಅರಣ್ಯ ಇಲಾಖೆಗೆ ಸೇರಿದ 2.10 ಎಕರೆ ಜಮೀನು ಒತ್ತುವರಿ ಮಾಡಿದ್ದರು. ಈ ಸಂಬಂಧ ಎಫ್.ಐ.ಆರ್. ದಾಖಲಿಸಿಕೊಂಡಿದ್ದ ಬೆಂಗಳೂರು ನಗರ ಜಿಲ್ಲೆಯ ಅರಣ್ಯಾಧಿಕಾರಿಗಳು ಜೆಸಿಬಿಗಳೊಂದಿಗೆ ಕಾರ್ಯಾಚರಣೆ ನಡೆಸಿ ಭೂಮಿಯನ್ನು ವಶಕ್ಕೆ ಪಡೆದಿದ್ದಾರೆ. ಇದರ ಮಾರುಕಟ್ಟೆ ಮೌಲ್ಯ ಸುಮಾರು 40 ಕೋಟಿ ರೂ.ಗೂ ಅಧಿಕ ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ 1 ವರ್ಷದಲ್ಲಿ 103 ಎಕರೆ ಅರಣ್ಯ ಒತ್ತುವರಿ ತೆರವು:

ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಇದ್ದು, ರಾಜಧಾನಿಯಲ್ಲಿ ಒತ್ತುವರಿ ಮಾಡಿರುವ ಅರಣ್ಯ ಭೂಮಿಯ ಒತ್ತುವರಿಗೆ ಕ್ರಮ ವಹಿಸುವಂತೆ ಅರಣ್ಯ ಸಚಿವರು ಸ್ಪಷ್ಟ ಸೂಚನೆ ನೀಡಿದ್ದು, ಅಧಿಕಾರಿಗಳು ಈವರೆಗೆ 103 ಎಕರೆಗೂ ಹೆಚ್ಚು ಒತ್ತುವರಿ ತೆರವುಗೊಳಿಸಿದ್ದಾರೆ.

ಕಗ್ಗಲಿಪುರ ವಲಯದ ಬಿಎಂ ಕಾವಲಿನಲ್ಲಿ 27.2 ಎಕರೆ, ತುರಹಳ್ಳಿ ಅರಣ್ಯ ವ್ಯಾಪ್ತಿಯ ಮೈಲಸಂದ್ರ, ಬಿ.ಎಂ. ಕಾವಲ್ ಮತ್ತು ಕೆಂಚೇನಹಳ್ಳಿಯಲ್ಲಿ 16.9 ಎಕರೆ, ಸೂಲಿಕೆರೆ ಮೀಸಲು ಅರಣ್ಯ ಪ್ರದೇಶದ ಸೂಲಿಕೆರೆಯಲ್ಲಿ 2.5 ಎಕರೆ, ಯು.ಎಂ. ಕಾವಲ್ ನಲ್ಲಿ 1 ಎಕರೆ, ಆನೆಕಲ್ ವಲಯದ ಭೂತನಹಳ್ಳಿ, ರಾಗಿಹಳ್ಳಿಯಲ್ಲಿ 14.4 ಎಕರೆ, ಬೆಂಗಳೂರು, ಜಾರಕಬಂಡೆ ಕಾವಲು, ಪೀಣ್ಯದಲ್ಲಿ 18 ಎಕರೆ, ಯಲಹಂಕ ವಲಯದ ಕೊತ್ತನೂರಿನಲ್ಲಿ 17.3 ಎಕರೆ, ಮಾರಸಂದ್ರದಲ್ಲಿ 2.10 ಎಕರೆ, ಇತರೆ 3 ಎಕರೆ 6 ಗುಂಟೆ ಒತ್ತುವರಿ ತೆರವು ಮಾಡಲಾಗಿದೆ. ತೆರವು ಮಾಡಲಾಗಿರುವ ಭೂಮಿಯ ಒಟ್ಟು ಮೌಲ್ಯ 3000 ಸಾವಿರ ಕೋಟಿ ರೂ.ಗೂ ಅಧಿಕವಾಗಿದೆ.

ಇದಲ್ಲದೆ ಕೊತ್ತನೂರಿನಲ್ಲಿ ಇನ್ನೂ48ರಲ್ಲಿ ಸುಮಾರು 700 ಕೋಟಿ ರೂ. ಬೆಲೆ ಬಾಳುವ 22 ಎಕರೆ 08 ಗುಂಟೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ಇದನ್ನು ತೆರವು ಮಾಡಲು ಕಾನೂನು ಕ್ರಮಕ್ಕ ಮುಂದಾಗುವಂತೆ ಕೂಡ ಈಶ್ವರ ಖಂಡ್ರೆ ಈಗಾಗಲೇ ಸೂಚನೆ ನೀಡಿದ್ದಾರೆ.

GOOD NEWS: ‘ಚಾರಣ ತಾಣ’ಗಳಲ್ಲಿ ‘ನಕಲಿ ಟಿಕೆಟ್ ಹಾವಳಿ’ ತಡೆಗೆ ‘ಸಂಚಾರಿ ದಳ’ ಆರಂಭ: ಸಚಿವ ಈಶ್ವರ್ ಖಂಡ್ರೆ

ಈ ಪ್ರಸಿದ್ಧ ‘ಡೊಳ್ಳು ಕಲಾವಿದ’ನಿಗೆ ಸಿಗುವುದೇ ‘ 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ’.!?

Share. Facebook Twitter LinkedIn WhatsApp Email

Related Posts

BREAKING : 16 ಬಾರಿ ಮಚ್ಚಿನಿಂದ ಕೊಚ್ಚಿ, ಶವದ ಮೇಲೆ ಕಾಲಿಟ್ಟು ಪೋಸ್ ಕೊಟ್ಟ ಹಂತಕ : ಬೆಚ್ಚಿಬಿದ್ದ ಬೆಳಗಾವಿ ಜನತೆ!

03/02/2026 12:21 PM1 Min Read

BREAKING: ಮಾಜಿ ಸ್ಪೀಕರ್, ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

03/02/2026 12:11 PM1 Min Read

ರಾಯಚೂರಲ್ಲಿ ವಿದ್ಯುತ್ ಶಾಕ್ ನಿಂದ 5 ನೇ ತರಗತಿ ವಿದ್ಯಾರ್ಥಿನಿ ಸಾವು ಕೇಸ್ : ಮುಖ್ಯಶಿಕ್ಷಕ ಸಸ್ಪೆಂಡ್

03/02/2026 11:58 AM1 Min Read
Recent News

BREAKING : 16 ಬಾರಿ ಮಚ್ಚಿನಿಂದ ಕೊಚ್ಚಿ, ಶವದ ಮೇಲೆ ಕಾಲಿಟ್ಟು ಪೋಸ್ ಕೊಟ್ಟ ಹಂತಕ : ಬೆಚ್ಚಿಬಿದ್ದ ಬೆಳಗಾವಿ ಜನತೆ!

03/02/2026 12:21 PM

BREAKING: ‘ನಿಯಮ ಪಾಲಿಸಿ ಇಲ್ಲವೇ ಭಾರತ ಬಿಟ್ಟು ತೊಲಗಿ’: WhatsAppಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ!

03/02/2026 12:17 PM

BREAKING: ಮಾಜಿ ಸ್ಪೀಕರ್, ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

03/02/2026 12:11 PM

ನಕ್ಷತ್ರಲೋಕಕ್ಕೆ ಲಗ್ಗೆ ಇಟ್ಟ ‘ರೋಬೋ’ ಜ್ಞಾನ: ಸ್ಪೇಸ್‌ಎಕ್ಸ್ ಜೊತೆ xAI ವಿಲೀನ!

03/02/2026 12:00 PM
State News
KARNATAKA

BREAKING : 16 ಬಾರಿ ಮಚ್ಚಿನಿಂದ ಕೊಚ್ಚಿ, ಶವದ ಮೇಲೆ ಕಾಲಿಟ್ಟು ಪೋಸ್ ಕೊಟ್ಟ ಹಂತಕ : ಬೆಚ್ಚಿಬಿದ್ದ ಬೆಳಗಾವಿ ಜನತೆ!

By kannadanewsnow0503/02/2026 12:21 PM KARNATAKA 1 Min Read

ಬೆಳಗಾವಿ : ಬೆಳಗಾವಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ಒಂದು ನಡೆದಿದ್ದು ವ್ಯಕ್ತಿಯನ್ನು ಕೊಂದು ಶವದ ಮೇಲೆ ಕಾಲಿಟ್ಟು ಪೋಸ್ ಕೊಟ್ಟಿದ್ದಾನೆ…

BREAKING: ಮಾಜಿ ಸ್ಪೀಕರ್, ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

03/02/2026 12:11 PM

ರಾಯಚೂರಲ್ಲಿ ವಿದ್ಯುತ್ ಶಾಕ್ ನಿಂದ 5 ನೇ ತರಗತಿ ವಿದ್ಯಾರ್ಥಿನಿ ಸಾವು ಕೇಸ್ : ಮುಖ್ಯಶಿಕ್ಷಕ ಸಸ್ಪೆಂಡ್

03/02/2026 11:58 AM

ಉದ್ಯೋಗ ವಾರ್ತೆ : ಶೀಘ್ರ 2 ಸಾವಿರ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿ: ಸಚಿವ ಸುಧಾಕರ್

03/02/2026 11:48 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.