ಬೆಂಗಳೂರು : ಬೆಂಗಳೂರಿನಲ್ಲಿ ಇಂದು ಭೀಕರ ಅಪಘಾತ ಸಂಭವಿಸಿದ್ದು, ಸಂಬಂಧಿಕರ ಮದುವೆಗೆಂದು ತೆರಳುತ್ತಿದ್ದ ದಂಪತಿಗಳ ಬೈಕ್ ಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಪತ್ನಿ ಸಾವನ್ನಪ್ಪಿದ್ದು ಅದೃಷ್ಟವಶಾತ್ ಪತಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರ ಬಳಿ ನಡೆದಿದೆ.
ಟಿವಿಎಸ್ ಪ್ಯಾಲೇಸ್ ನಲ್ಲಿ ಸಂಬಂಧಿಕರ ಸಮಾರಂಭಕ್ಕೆ ದಂಪತಿಗಳು ನಾಗವಾರದಿಂದ ಬೈಕ್ ನಲ್ಲಿ ಮುನಿರಾಜು ಹಾಗೂ ಪತ್ನಿ ಮಲ್ಲಿಕಾ ದಂಪತಿಗಳು ಆಗಮಿಸಿದ್ದರು. ಈ ವೇಳೆ ಬೈಕ್ ಗೆ ಹಿಂದಿನಿಂದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ನಿಂದ ಕೆಳಗೆ ಬಿದ್ದು ಚಕ್ರಕ್ಕೆ ಸಿಲುಕಿ ಮಲ್ಲಿಕಾ (56) ಸಾವನ್ನಪ್ಪಿದ್ದಾರೆ.ವೈದೇಹಿ ಆಸ್ಪತ್ರೆಗೆ ಮಲ್ಲಿಕಾ ಶವವನ್ನು ಪೊಲೀಸರು ಸ್ಥಳಾಂತರಿಸಿದ್ದಾರೆ. ಘಟನೆ ಕುರಿತಂತೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.