ಬೆಂಗಳೂರು: ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರಕಾರದ ಸಚಿವ ಬೈರತಿ ಸುರೇಶ್ ಅವರು ಮಹಿಳೆಯರ ಮಾನಹಾನಿ ಮಾಡುವಂಥ ಹೇಳಿಕೆ ನೀಡಿದ್ದನ್ನು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ತೀವ್ರವಾಗಿ ಖಂಡಿಸಿದ್ದಾರೆ. ಸುರೇಶ್ ಅವರ ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲು ಸಿದ್ಧ ಎಂದು ಅವರು ಎಚ್ಚರಿಸಿದ್ದಾರೆ.
ಸಚಿವ ಸ್ಥಾನದಲ್ಲಿರುವ ಬೈರತಿ ಸುರೇಶ್ ಅವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಯಡಿಯೂರಪ್ಪನವರು ನಮ್ಮ ಸಂಬಂಧ 35 ವರ್ಷಗಳಿಂದ ನೋಡಿಕೊಂಡು ಬರುತ್ತಿದ್ದೇನೆ ಅವಾಗ ನೀವು ಇನ್ನು ರಾಜಕೀಯದಲ್ಲಿ ಬಚ್ಚ ತಾವು ಸಚಿವರಾಗಿ ಇಂಥ ಕೇಳು ಮಟ್ಟ ಹೇಳಿಕೆಗಳನ್ನು ಕೊಡಬಾರದು. ಯಡಿಯೂರಪ್ಪಜೀ ಮೈತ್ರಾದೇವಿ, ಶೋಭಾ ಕರಂದ್ಲಾಜೆ ಅವರ ಬಗ್ಗೆ ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದನ್ನು ಖಂಡಿಸುತ್ತೇನೆ. ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ತಿಳಿಸಿದ್ದಾರೆ.
ಬೇರೆಯವರ ವೈಯಕ್ತಿಕ ಬದುಕಿನ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ. ಮಹಿಳೆಯರ ತೇಜೋವಧೆ ಮಾಡುವುದನ್ನು ನಿಲ್ಲಿಸಿ ಎಂದು ಅವರು ಆಗ್ರಹಿಸಿದ್ದಾರೆ.
ತಮ್ಮ ಮೇಲೆ ಅಪವಾದ ಬಂದ ತಕ್ಷಣ ಮಹಿಳೆಯರ ಗುಣನಡತೆ ಕುರಿತು ಆರೋಪ ಮಾಡುವುದು ಇವರಿಗೆ ಅಭ್ಯಾಸವಾಗಿದೆ. ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವವರ ಗುಣನಡತೆ ಬಗ್ಗೆ ಮಾತನಾಡುವುದು ಅಕ್ಷಮ್ಯ. ಮೈತ್ರಾದೇವಿ ಅವರು ತಾಯಿ ಸಮಾನ. ಅವರು ಸಾವನ್ನಪ್ಪಿ ಹಲವಾರು ವರ್ಷಗಳು ಕಳೆದಿದ್ದು, ಈಗ ಅದರ ಕುರಿತು ಮಾತನಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
ಇಂಥ ಬೇಜವಾಬ್ದಾರಿ ಹೇಳಿಕೆಗಳನ್ನು ನಿಲ್ಲಿಸದಿದ್ದಲ್ಲಿ ತಾವು ನಗರಾಭಿವೃದ್ಧಿ ಸಚಿವರಾಗಿದ್ದೀರಿ ಉತ್ತಮವಾದ ಅಧಿಕಾರವನ್ನು ನಡೆಸಿಕೊಂಡು ಹೋಗಬೇಕು ಎಂದು ಎಚ್ಚರಿಸಿದ್ದಾರೆ ಅವರ ಮೂಡ ಹಗರಣದ ಮುಚ್ಚಾಕೊಳು ಈ ರೀತಿ ಹೇಳಿಕೆ ನೀಡಿ ವಿಷಾಂತರ ಮಾಡಲು ಹೊರಟಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.