ಕೊಡಗು : ಕೊಡಗಿನಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಅಪ್ರಾಪ್ತೆಗೆ ಜನಿಸಿದ್ದ ನವಜಾತ ಶಿಶು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಆದರೆ ಅಪ್ರಾಪ್ತೆ ತಾಯೀನೇ ಶಿಶುವನ್ನು ನಾಪತ್ತೆ ಮಾಡಿದ್ದಾಳೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಅಕ್ಟೋಬರ್ 17ರಂದು ಅಪ್ರಾಪ್ತೆ ರಹಸ್ಯವಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿ ತಾಯಿಯೇ ಮಗುವನ್ನು ನಾಪತ್ತೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಗರ್ಭಿಣಿಯಾಗಲು 13 ವರ್ಷದ ಬಾಲಕ ಕಾರಣ ಅಂತ ಹೇಳಿದ್ದಳು.
ಈ ಹಿನ್ನೆಲೆಯಲ್ಲಿ ಇದೀಗ ಪೊಲೀಸರು ಬಾಲಕನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಶಿಶುವಿನ DNA ಪರೀಕ್ಷೆಗೆ ಬಾಲಕನ ಪೋಷಕರು ಆಗ್ರಹಿಸಿದ್ದಾರೆ. ಹೆರಿಗೆ ನಂತರ ಚಿಕಿತ್ಸೆ ಇಲ್ಲದೆ ಬಾಲಕೀಯ ಸ್ಥಿತಿ ಗಂಭೀರವಾಗಿತ್ತು.ಆರೋಗ್ಯ ಹದಗೆಟ್ಟ ನಂತರ ಬಾಲಕಿ ಆಸ್ಪತ್ರೆಗೆ ದಾಖಲಾಗಿದ್ದಳು. ಬಾಲಕಿಯನ್ನು ತಡವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಹೆರಿಗೆಯಾಗಿ ನಾಲ್ಕು ದಿನ ಕಳೆದರೂ ನವಜಾತ ಶಿಶು ಪತ್ತೆಯಾಗಿಲ್ಲ. ನವಜಾತ ಶಿಶುವನ್ನು ಹುಡುಕದೆ ಅಧಿಕಾರಿಗಳು ಹಾಗೂ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ಕೊಡಗು ಜಿಲ್ಲಾ ಪೊಲೀಸರ ವಿರುದ್ಧ ಗ್ರಾಮಸ್ಥರು ಇದೀಗ ಆಕ್ರೋಶ ಹೊರಹಾಕಿದ್ದಾರೆ.