ಬೆಂಗಳೂರು : ದೇಶದಾದ್ಯಂತ ಹಲವು ವಿಮಾನ ನಿಲ್ದಾಣಗಳಿಗೆ, ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್ ಕರೆ ಬರುತ್ತಿರುವ ಬೆಳವಣಿಗೆಗಳ ನಡುವೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದೆ. ಇದರ ಮಧ್ಯ ಇದೀಗ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೂಡ ಬಾಂಬ್ ಬೆದರಿಕೆ ಕರೆ ಬಂದಿದೆ. ಆದರೆ ಅದು ಹುಸಿ ಬಾಂಬ್ ಬೆದರಿಕೆ ಸಂದೇಶ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದವರ ವಿರುದ್ಧ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಹೌದು ಟ್ವೀಟ್ ಮೂಲಕ ಕೆಂಪೇಗೌಡ ಏರ್ಪೋರ್ಟ್ಗೆ ಬೆದರಿಕೆ ಹಾಕಿದ ಸಂದೇಶ ಬಂದಿದೆ. ಕಮಾಂಡ ಸೆಂಟರ್ ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ ಬಂದಿದೆ. ಆರು ವಿಮಾನಗಳಲ್ಲಿ 12 ಡಾಂಬರ್ ಗಳಿದ್ದಾರೆಂದು ಟ್ವೀಟ್ ಮಾಡಲಾಗಿದೆ. ಪ್ರತಿಯೊಂದು ವಿಮಾನದಲ್ಲಿ ಇಬ್ಬರು ಬಾಂಬರ್ ಗಳಿದ್ದಾರೆ ಎಂದು ಟ್ವೀಟ್ ಮಾಡಲಾಗಿದೆ.
ಅನಾಮಧಯ ಟ್ವಿಟರ್ ಖಾತೆಯಿಂದ ಈ ಒಂದು ಸಂದೇಶ ಬಂದಿದೆ. ಮಂಗಳೂರು-ದುಬೈ ತಿರುವನಂತಪುರಂ-ಮಾಸ್ಕಟ್ ಸೇರಿದಂತೆ ವಿವಿಧ ವಿಮಾನಗಳಲ್ಲಿ ತೆರಳುವ ವಿಮಾನಗಳಲ್ಲಿ ಬಾಂಬರ್ ಗಳಿದ್ದಾರೆ ಎಂದು ಟ್ವೀಟ್ ಮೂಲಕ ತಿಳಿದು ಬಂದಿದೆ. ಇದೀಗ ಕೆಂಪೇಗೌಡ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.