ಬೆಳಗಾವಿ : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ರೈತ ಮಹಿಳೆಯೊಬ್ಬರು ಎತ್ತು ಖರೀದಿ ಮಾಡಿರುವ ಘಟನೆ ನಡೆದಿದೆ.
ಬೆಳಗಾಗಿ ಜಿಲ್ಲೆಯ ಗೋಕಾಕ್ ತಾಲೂಕಿನ ತವಗ ಗ್ರಾಮದಲ್ಲಿ ಗೃಹಲಕ್ಷ್ಮಿ ಯೋಜನೆಯಿಂದ ಬರುವ 2 ಸಾವಿರ ರೂ. ಜೋಡಿಸಿಕೊಂಡು 22 ಸಾವಿರ ರೂ. ಕೊಟ್ಟು ಎತ್ತು ಖರೀದಿಸಿದ್ದಾರೆ.
ಬಸವ್ವ ಹಾಗೂ ಶಿವಪ್ಪ ದಂಪತಿ ಮನೆಯಲ್ಲಿ ಈ ಹಿಂದೆ ಒಂದೇ ಎತ್ತು ಇತ್ತು. ಹೀಗಾಗಿ ಬೇಸಾಯಕ್ಕಾಗಿ ಮತ್ತೊಂದು ಎತ್ತು ಖರೀದಿಸಲು ಗೃಹಲಕ್ಷ್ಮಿ ಹಣ ಜೋಡಿಸಿಕೊಂಡಿದ್ದಾರೆ. ಮಕ್ಕಳಿಲ್ಲದ ಬಸವ್ವ ಶಿವಪ್ಪ ಸಣ್ಣ ಪ್ರಮಾಣದ ರೈತ ಕುಟುಂಬವಾಗಿದ್ದು, ಇದೀಗ ಗೃಹಲಕ್ಷ್ಮಿ ಯೋಜನೆಯ 22 ಸಾವಿರ ರೂ.ನಿಂದ ಮತ್ತೊಂದು ಎತ್ತು ಖರೀದಿಸಿದ್ದಾರೆ. ಬಸವ್ವ ಮನೆಗೆ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಮಹಾಂತೇಶ್ ಭೇಟಿ ನೀಡಿ ದಂಪತಿಗೆ ವೈಯಕ್ತಿಕವಾಗಿ ನೆರವು ನೀಡಿದ್ದಾರೆ.