ಬೆಂಗಳೂರು: ನಗರದಲ್ಲಿನ ಹಿರಿಯ ನಾಗರೀಕರಿಗೆ ನೆರವಾಗೋದಕ್ಕೆ ಸಹಾಯವಾಣಿ ಸಂಖ್ಯೆ ಆರಂಭಿಸಲಾಗಿದೆ. ಈ ಸಹಾಯವಾಣಿ ಸಂಖ್ಯೆಗೆ ಹಿರಿಯ ನಾಗರೀಕರು ಕರೆ ಮಾಡಿ ತಮ್ಮ ಸಮಸ್ಯೆ, ದೂರು ಸಲ್ಲಿಸಬಹುದು. ಅಲ್ಲದೇ ಕಾನೂನು ಸಲಹೆ ಬೇಕಿದ್ದರೂ ಕೋರಬಹುದಾಗಿದೆ. ಅಂತವರಿಗೆ ಕಾನೂನು ಸಲಹೆ ಉಚಿತವಾಗಿ ನೀಡಲಾಗುತ್ತದೆ ಎಂಬುದಾಗಿ ಬೆಂಗಳೂರು ನಗರ ಪೊಲೀಸ್ ಇಲಾಖೆ ತಿಳಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ನಗರ ಪೊಲೀಸ್ ಹಾಗೂ ನೈಟಿಂಗೇಲ್ ಮೆಡಿಕಲ್ ಟ್ರಸ್ಟ್ ಜಂಟಿ ಸಹಯೋಗದಲ್ಲಿ ಕಳೆದ 22 ವರ್ಷಗಳಿಂದ ಹಿರಿಯರ ಸಹಾಯವಾಣಿ ಕಾರ್ಯ ನಿರ್ವಹಿಸುತ್ತಿದೆ ಎಂದಿದೆ.
ಹಿರಿಯರ ಸಹಾಯವಾಣಿ ಪೊಲೀಸ್ ಆಯುಕ್ತರ ಕಛೇರಿಯ ಕಮಾಂಡ್ ಸೆಂಟರ್ ವಿಭಾಗದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕಾನೂನಿಗೆ ಸಂಬಂಧಿಸಿದಂತೆ ಯಾವುದಾದರೂ ಸಮಸ್ಯೆಗಳು ಇದ್ದರೆ, ಪ್ರತಿ ಶನಿವಾರ ಮಧ್ಯಾಹ್ನ 2.30 ಗಂಟೆಯಿಂದ ಸಂಜೆ 4.30 ಗಂಟೆಯ ವರೆಗೆ ಉಚಿತ ಕಾನೂನು ಸಲಹೆಯನ್ನು ನುರಿತ ವಕೀಲರಿಂದ ನೀಡಲಾಗುತ್ತಿದೆ ಎಂದು ಹೇಳಿದೆ.
ಹಿರಿಯ ನಾಗರಿಕರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080-23352833 ಅಥವಾ ಮೊಬೈಲ್ ಸಂಖ್ಯೆ 7899241090 ಗೆ ಕರೆ ಮಾಡಿ ಪಡೆಯಬಹುದಾಗಿದೆ.
GOOD NEWS: ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ‘ನಂದಿನಿ ಇಡ್ಲಿ ಮತ್ತು ದೋಸೆ ಸಿದ್ಧ ಹಿಟ್ಟು’ | Nandini Products
ಆನ್ ಲೈನ್ ಸ್ಕ್ಯಾಮ್ ವಿರುದ್ಧ ಜಾಗೃತಿ: ಕೇಂದ್ರ ಸರ್ಕಾರದೊಂದಿಗೆ ಜಂಟಿ ಉಪಕ್ರಮವನ್ನು ಪ್ರಾರಂಭಿಸಿದ ‘ಮೆಟಾ’