ಬೆಂಗಳೂರು : ಈಗಾಗಲೇ ಸಿಎಂ ಸಿದ್ದರಾಮಯ್ಯ ಸರ್ಕಾರ ಹಳೆ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಹಿಂಪಡೆದಿದೆ. ಈ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ವಿರೋಧ ಪಕ್ಷದ ನಾಯಕರು ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಇದರ ಮಧ್ಯ ಮಾಜಿ ಸಚಿವ ರೋಷನ್ ಬೇಗ್ ಅವರು ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿ ಆರೋಪಿಗಳ ಮೇಲಿನ ಕೇಸ್ ಗಳನ್ನು ಕೂಡ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಕೇಸ್ಗಳನ್ನು ವಾಪಸ್ ಪಡೆಯಲು ಕ್ಯಾಬಿನೆಟ್ ನಿರ್ಧಾರ ಮಾಡಿದ್ದಾರೆ. ಇದಾದ ಬಳಿಕ ಬೆಂಗಳೂರಿನಲ್ಲಿ ಸಮಾಜದ ಜನರು ಬಂದು ನನಗೆ ಮನವಿ ಮಾಡಿದ್ದರು. ನಾನು ಸಮಾಜದ ನಾಯಕರ ಜೊತೆಗೆ ನಾಯಕರನ್ನು ಭೇಟಿ ಮಾಡಿದೆ. ಸುಮಾರು 35 ಜನರು ಜೈಲಿನಲ್ಲಿದ್ದಾರೆ.
ನಾವು ಈ ದೇಶದವರು ಇಲ್ಲೇ ಇರುತ್ತೇವೆ. ನಮ್ಮನ್ನು ಸಮುದ್ರಲ್ಲಿ ಹಾಕುತ್ತೀರಾ? ಯುಎಪಿಎ ಕೇಸ್ ದಾಖಲಿಸಿದ್ದರು ಅದನ್ನು ವಾಪಸ್ ಪಡೆಯಲು ದಾರಿಗಳಿದೆ. ದಾರಿ ಇಲ್ಲ ಅಂತಾ ಹತ್ತು ವರ್ಷ ಜೈಲಿನಲ್ಲಿ ಇರಬೇಕಾ? ಮಾನವ ಹಕ್ಕುಗಳ ಆಯೋಗ ಏನು ಮಾಡುತ್ತಿದೆ. ದೇಶದ್ರೋಹಿಗಳ ಮೇಲೆ ಕೇಸ್ ದಾಖಲಿಸಿ, ಬೆಂಕಿ ಹಚ್ಚುವವರನ್ನು ಬಂಧಿಸಿ. ಗುಂಪಿನಲ್ಲಿರುವ ಸಾಮಾನ್ಯ ಜನರನ್ನು ಬಿಟ್ಟು ಬಿಡಿ. ನಾನು ಮಾನವ ಹಕ್ಕುಗಳ ಆಯೋಗಕ್ಕೆ ಸಂಪರ್ಕ ಮಾಡುವ ಚಿಂತಿಸಿದ್ದೇನೆ ಎಂದು ಹೇಳಿದ್ದಾರೆ.
ಗೂಂಡಾ ಕಾಯ್ದೆಯಲ್ಲಿರುವನ್ನು ಬಂಧಿಸಿ ಬೇಡ ಅನ್ನಲ್ಲ. ಆದರೆ ಸಣ್ಣ ಸಣ್ಣ ಹುಡುಗರನ್ನು ಬಂಧಿಸಿದ್ದಾರೆ. ಹಾಗಾಗಿ ಹುಬ್ಬಳ್ಳಿ ರೀತಿಯಲ್ಲಿ ಕೆಜೆ ಹಳ್ಳಿ-ಡಿಜೆ ಹಳ್ಳಿ ಗಲಭೆ ಪ್ರಕರಣ ವಾಪಸ್ ಪಡೆಯುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ಗೆ ಮನವಿ ಮಾಡಿದ್ದಾರೆ ಎಂದು ತಿಳಿಬಂದಿದೆ.