ಬಳ್ಳಾರಿ : ಶಾಸಕ ಜನಾರ್ದನ ರೆಡ್ಡಿ ಭಯ ಬಿದ್ದು ಕೋಮುವಾದಿ ಪಕ್ಷಕ್ಕೆ ಹೋಗಿದ್ದಾರೆ. ಇಡಿ, ಸಿಬಿಐ ಭಯದಿಂದ ಜನಾರ್ದನ ರೆಡ್ಡಿ ಬಿಜೆಪಿ ಸೇರಿದ್ದಾರೆ. ಹೊಸ ಪಕ್ಷ ಕಟ್ಟಿದಾಗ ಬಿಜೆಪಿ ವಿರುದ್ಧ ಎಷ್ಟು ಆರೋಪ ಮಾಡಿದ್ದರು ಗೊತ್ತಾ? ರೆಡ್ಡಿ ಸಂಡೂರಿನಲ್ಲಿ ಅರಮನೆ ಮಾಡಿದ್ರು ಕಾಂಗ್ರೆಸ್ ಗೆಲುವು ಫಿಕ್ಸ್ ರೆಡ್ಡಿ ಬಳ್ಳಾರಿಗೆ ಬಂದಿರುವುದು ಪಕ್ಷದ ಮೇಲೆ ಪರಿಣಾಮ ಬೀರಲ್ಲ ಎಂದು ಬಿಜೆಪಿ ವಿರುದ್ಧ ಶಾಸಕನಾಗಿದ್ರೆ ವಾಗ್ದಾಳಿ ನಡೆಸಿದರು.
ಬಳ್ಳಾರಿಯಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ನಾನು ಯಾವುದೇ ಹಗರಣ ಮಾಡಿಲ್ಲ. ಇದೆಲ್ಲ ಬಿಜೆಪಿ ಕುತಂತ್ರ ಎಂದು ಬಳ್ಳಾರಿಯಲಿ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಗಂಭೀರವಾದ ಆರೋಪ ಮಾಡಿದರು. ಸರ್ಕಾರವನ್ನು ಅಸ್ಥಿರಗೊಳಿಸಲು ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಸಿಬಿಐ ಇಡಿ ಬಳಸಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಪ್ರಕರಣದಿಂದ ಸಂಪೂರ್ಣವಾಗಿ ಮುಕ್ತನಾಗುತ್ತೇನೆ ಎಂದರು.
ಯುಪಿಎ ಸರ್ಕಾರ ಇದ್ದಾಗ ನಾಗೇಂದ್ರ ಜೈಲಿಗೆ ಹೋಗಿದ್ದಾರೆ ಎಂದು ಜನಾರ್ಧನ್ ರೆಡ್ಡಿ ಹೇಳಿಕೆ ವಿಚಾರವಾಗಿ, ಆಗ ಅವರ ಜೊತೆ ಇದ್ದಾಗ ನಾನು ಒಳ್ಳೆಯವನು ಇದ್ದೆ. ಈಗ ಪಕ್ಷ ಬದಲಾದ ಕೂಡಲೇ ನಾಗೇಂದ್ರ ಕೆಟ್ಟವನು ಆಗ್ತಾನ? ಶಾಸಕ ಜನಾರ್ದನ ರೆಡ್ಡಿಗೆ ಸ್ವಲ್ಪ ಆತ್ಮಸಾಕ್ಷಿ ಇದ್ದರೆ ನೋಡಿಕೊಳ್ಳಲಿ. ರೆಡ್ಡಿ ಅಲ್ಲ ಯಾರೇ ಬಂದರೂ ಸಂಡೂರಿನಲ್ಲಿ ಕಾಂಗ್ರೆಸ್ ಗೆಲವು ಫಿಕ್ಸ್ ಎಂದು ಬಳ್ಳಾರಿಯಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಶಾಸಕ ಬಿ ನಾಗೇಂದ್ರ ವಾಗ್ದಾಳಿ ನಡೆಸಿದರು.