ನವದೆಹಲಿ : ದೀಪಾವಳಿಗೆ ಮುಂಚಿತವಾಗಿ ರೈತರಿಗೆ ದೀಪಾವಳಿ ಉಡುಗೊರೆ ಸಿಕ್ಕಿದ್ದು, ಕೇಂದ್ರ ಸರ್ಕಾರವು ಪ್ರಮುಖ ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಬುಧವಾರ ನಡೆದ ಕ್ಯಾಬಿನೆಟ್ ಸಭೆಯ ನಂತರ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ನಿರ್ಧಾರವನ್ನು ಪ್ರಕಟಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಗೋಧಿ, ಕಡಲೆ ಮತ್ತು ಸಾಸಿವೆ ಸೇರಿದಂತೆ ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನೀಡಲು ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಪ್ರಕಟಿಸಿದ್ದಾರೆ.
ಗೋಧಿಯ ಕನಿಷ್ಠ ಬೆಂಬಲ ಬೆಲೆಯನ್ನ ಪ್ರತಿ ಕ್ವಿಂಟಾಲ್ ಗೆ 150 ರೂ.ಗಳಷ್ಟು ಹೆಚ್ಚಿಸಲಾಗಿದೆ. ಅಂದರೇ, 2,275 ರೂ.ಗಳಿಂದ 2,425 ರೂ.ಗೆ ಹೆಚ್ಚಿಸಲಾಗಿದೆ. ಇನ್ನು ಸಾಸಿವೆಗೆ ಕನಿಷ್ಠ ಬೆಂಬಲ ಬೆಲೆಯನ್ನ 300 ರೂಪಾಯಿ ಹೆಚ್ಚಿಸಿದ್ದು, 5,950 ರೂ.ಗೆ ಹೆಚ್ಚಳ ಮಾಡಲಾಗಿದೆ. ಇನ್ನು ಕಡಲೆಗೆ 210 ರೂಪಾಯಿ ಹೆಚ್ಚಿಸಲಾಗಿದ್ದು, 5,650 ರೂ.ಗೆ ತಲುಪಲಿದೆ.
ಇನ್ನು ಬಾರ್ಲಿ, ಮಸೂರ್, ಕುಸುಬೆ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು ಕ್ರಮವಾಗಿ 1,980, 6,700 ಮತ್ತು 5,940 ರೂ.ಗೆ ಹೆಚ್ಚಿಸಲಾಗಿದೆ.
6 ಬೆಳೆಗಳ ವಿವರಗಳು ಇಲ್ಲಿವೆ.!
ಗೋಧಿ – 2275 ರೂ.ಗಳಿಂದ 2425 ರೂಪಾಯಿ
ಬಾರ್ಲಿ – 1850 ರೂ.ನಿಂದ 1980 ರೂಪಾಯಿ
ಕಡಲೆ – 5440 ರೂ.ನಿಂದ 5650 ರೂಪಾಯಿ
ಬೇಳೆಕಾಳು – 6425 ರಿಂದ 6700 ರೂಪಾಯಿ
ರಾಪ್ಸೀಡ್/ ಸಾಸಿವೆ – 5650 ರೂ.ಗಳಿಂದ 5950 ರೂಪಾಯಿ
ಕುಸುಬೆ – 5800 ರೂ.ಗಳಿಂದ 5940 ರೂಪಾಯಿ
ಎಂಎಸ್ಪಿ, ಅಥವಾ ಕನಿಷ್ಠ ಬೆಂಬಲ ಬೆಲೆ, ಸರ್ಕಾರವು ನಿಗದಿಪಡಿಸಿದ ಬೆಲೆಯಾಗಿದ್ದು, ಇದು ರೈತರಿಂದ ಕೆಲವು ಕೃಷಿ ಉತ್ಪನ್ನಗಳನ್ನ ಖರೀದಿಸುತ್ತದೆ. ಮಾರುಕಟ್ಟೆ ಬೆಲೆಗಳು ಕಡಿಮೆ ಇದ್ದರೂ ಸಹ, ರೈತರು ತಮ್ಮ ಬೆಳೆಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯುತ್ತಾರೆ ಎಂದು ಖಚಿತಪಡಿಸಿಕೊಳ್ಳುವುದು, ಆರ್ಥಿಕ ನಷ್ಟದಿಂದ ಅವರನ್ನು ರಕ್ಷಿಸಲು ಸಹಾಯ ಮಾಡುವುದು ಇದರ ಉದ್ದೇಶವಾಗಿದೆ.
ರಾಜ್ಯದ ಪರಿಶಿಷ್ಟ ಪಂಗಡದವರಿಗೆ ಗುಡ್ ನ್ಯೂಸ್: ಉದ್ಯಮಶೀಲತೆ ಅಭಿವೃದ್ಧಿ ಯೋಜನೆಗೆ ಅರ್ಜಿ ಆಹ್ವಾನ