ನವದೆಹಲಿ:ಕೇಂದ್ರ ಸರ್ಕಾರವು ತನ್ನ ಕೋಟಿಗೂ ಹೆಚ್ಚು ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು (ಡಿಎ) ಶೇಕಡಾ 3 ರಷ್ಟು ಹೆಚ್ಚಿಸಲು ಸಜ್ಜಾಗಿದೆ, ಒಟ್ಟು ಶೇಕಡಾ 38 ರಿಂದ 45 ಕ್ಕೆ ತಲುಪಿದೆ
ದೀಪಾವಳಿಗೆ ವಾರಗಳ ಮೊದಲು ಇಂದು ಬೆಳಿಗ್ಗೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಹಬ್ಬದ ಋತುವಿನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಇದು ದೊಡ್ಡ ಗಿಫ್ಟ್ ಆಗಿದೆ.
ಹೆಚ್ಚುತ್ತಿರುವ ಬೆಲೆಗಳನ್ನು ಸರಿದೂಗಿಸಲು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ನೀಡಲಾಗುತ್ತದೆ. ವರ್ಷಕ್ಕೆ ಎರಡು ಬಾರಿ ನಿಯತಕಾಲಿಕವಾಗಿ ಪರಿಷ್ಕರಿಸಲಾಗುವ ಈ ಭತ್ಯೆಯನ್ನು ಕೈಗಾರಿಕಾ ಕಾರ್ಮಿಕರಿಗೆ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ