ಶಿವಮೊಗ್ಗ : ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತವಾಗಿದ್ದು, ಸಿಟಿ ಬಸ್ ವೊಂದು ಚರಂಡಿಗೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಶಿವಮೊಗ್ಗದ ವಿನೋಬನಗರದಲ್ಲಿ ಸಿಟಿ ಬಸ್ ಚರಂಡಿಗೆ ಬಿದ್ದಿದೆ. ಎರಡು ಮಕ್ಕಳು ಸೇರಿದಂತೆ ಆರು ಜನರಿಗೆ ಗಾಯ ಇಬ್ಬರಿಗೆ ತೀವ್ರ ಗಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ವಿನೋಬನಗರದ ಬೊಮ್ಮನಕಟ್ಟೆ ರೈಲ್ವೆ ಗೇಟ್ ನ ಪಕ್ಕದ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದ್ದು, ಅತಿಯಾದ ವೇಗದಿಂದ ಬಂದಿದ್ದು ಹಂಪ್ ಹಾರಿ ಸ್ಟೇರಿಂಗ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬವನ್ನು ಉರುಳಿಸಿ 10 ಮೀಟರ್ ಕಬ್ಬಿಣದ ಫೆನ್ಸಿಂಗ್ ಅನ್ನು ಕೂಡ ಉರುಳಿಸಿ ಚರಂಡಿಗೆ ಬಸ್ ಉರುಳಿದೆ. ಬೊಮ್ಮನಕಟ್ಟೆಯಿಂದ ಗೋಪಾಲಕ್ಕೆ ಹೋಗುವ ಸಿಟಿ ಬಸ್ .ವೀರಭದ್ರೇಶ್ವರ.ka-13 D-5290 ಬಸ್ ಇದಾಗಿದ್ದು, ಬಸ್ ನಲ್ಲಿ 20 ಪ್ರಯಾಣಿಕರಿದ್ದರು. ಸಾರ್ವಜನಿಕರ ಸಹಕಾರದಿಂದ ಸರ್ಜಿ ಹಾಗೂ ಮೆಗ್ಗಾನ್ ಆಸ್ಪತ್ರೆಗೆ ಪ್ರಯಾಣಿಕರನ್ನು ದಾಖಲಿಸಲಾಗಿದೆ.