ರಾಮನಗರ : ಮನೆಯ ಬಳಿ ನಿಂತಿದ್ದ ಬಾಲಕನ ಮೇಲೆ ಏಕಾಏಕಿ ಚಿರತೆ ದಾಳಿ ಮಾಡಿದ್ದು, ಮನೆಯವರ ಶಬ್ದಕ್ಕೆ ಹೆದರಿ ಚಿರತೆ ಬಾಲಕನನ್ನು ಬಿಟ್ಟು ಪರಾರಿ ಆಗಿರುವ ಘಟನೆ ತಾಲೂಕಿನ ಚಿಕ್ಕಗಂಗವಾಡಿ ಗ್ರಾಮದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಈ ಒಂದು ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಮನೆಯ ಎದುರು ಬಾಲಕ ಸಮರ್ಥ್ (10) ನಿಂತಿದ್ದಾಗ ಏಕಾಏಕಿ ಚಿರತೆ ದಾಳಿ ಮಾಡಿದೆ. ಈ ವೇಳೆ ಬಾಲಕನ ಚೀರಾಟವನ್ನು ಕೇಳಿ ಮನೆಯವರು ಮನೆ ಹೊರಗಡೆ ಲೈಟ್ ಹಾಕಿದ್ದಾರೆ.
ಮನೆಯವರ ಶಬ್ದಕ್ಕೆ ಹೆದರಿಕೊಂಡು ಚಿರತೆ ಬಾಲಕನನ್ನು ಬಿಟ್ಟು ಹೋಗಿದೆ. ಬಾಲಕನ ತಲೆ, ಕುತ್ತಿಗೆ ಹಾಗೂ ಕೈಕಾಲಿಗೆ ತೀವ್ರ ಗಾಯಗಳಾಗಿದ್ದು ಬೆಂಗಳೂರಿನ ಸೆಂಟ್‌ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.