ಬೆಂಗಳೂರು : ಸಿನಿಮಾ ಸ್ಟೈಲ್ ನಲ್ಲಿ ವ್ಯಕ್ತಿಯೊಬ್ಬ ಪಿಡಿಒ ಅಧಿಕಾರಿ ಬಳಿ ಇದ್ದಂತಹ ಫೈಲ್ ಅನ್ನು ಕಳ್ಳತನ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲದ ಹನುಮಂತಪುರ ಗೇಟ್ ಬಳಿ ಈ ಒಂದು ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರ ಪಿಡಿಒ ಗೀತಾಮಣಿ ಬಳಿ ಇದ್ದ ಕಡತ ಎಗರಿಸಿದ ಕಿರಾತಕ, ಅಲ್ಲಿಂದ ಪರಾರಿಯಾಗಿದ್ದಾನೇ. ಕಳಲುಘಟ್ಟ ಗ್ರಾಮ ಪಂಚಾಯಿತಿ ಪಿಡಿಓ ಗೀತಾಮಣಿ ಅವರು ಹೆದ್ದಾರಿ ಪಕ್ಕ ನಿಂದು ಮೊಬೈಲ್ನಲ್ಲಿ ಮಾತನಾಡುವಾಗ ಈ ಒಂದು ಘಟನೆ ನಡೆದಿದೆ.
ಇನ್ನು ಕಡತ ಕಸಿದುಕೊಂಡು ಪರಾರಿಯಾಗಿರುವ ವ್ಯಕ್ತಿಯನ್ನು ಗುಂಡೇನಹಳ್ಳಿ ಅರುಣ್ ಕುಮಾರ್ ಎಂದು ಹೇಳಲಾಗುತ್ತಿದ್ದು, ಆತನ ವಿರುದ್ಧ ಕಡತ ಕದ್ದಿರುವ ಆರೋಪ ಕೇಳಿ ಬಂದಿದೆ. ಕೋರ್ಟ್ ಅಲ್ಲಿ ಇದ್ದ ಅರುಣ್ ಕುಮಾರ್ ವಿರುದ್ಧ ಭೂಮಿವಾದ ಕೇಸ್ ಇದೆ. ನಾಳೆ ಕೋರ್ಟ್ ನಲ್ಲಿ ಭೂವಿವಾದ ಪ್ರಕರಣ ವಿತರಣೆ ನಡೆಯಲಿದೆ.
ಹಾಗಾಗಿ ಸಂಬಂಧ ಪಟ್ಟಂತಹ ಮೂಲ ಕಡತ ಎಗರಿಸಿದ್ದಾನೆ ಎಂದು ಗೀತಾಮಣಿ ಗಂಭೀರವಾದ ಆರೋಪ ಮಾಡಿದ್ದಾರೆ. ಹಾಗಾಗಿ ಅರುಣ್ ವಿರುದ್ಧ ಸಾರ್ವಜನಿಕ ಆಸ್ತಿ ನಾಶಪಡಿಸಲು ಯತ್ನದ ಅಡಿ ಪ್ರಕರಣ ದಾಖಲಾಗಿದೆ. ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.