ಕಲಬುರ್ಗಿ : ಕೊಲೆ ಪ್ರಕರಣದಲ್ಲಿ ಈ ಹಿಂದೆ ನಟ ದರ್ಶನ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಅಲ್ಲಿ ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಳಿಕ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಇದೀಗ ನಿನ್ನೆ ಕಲ್ಬುರ್ಗಿ ಜೈಲಿನಲ್ಲೂ ಕೂಡ ರಾಜ್ಯಾತಿಥ್ಯ ಪ್ರಕರಣ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ 7 ಕೈದಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹೌದು ಜೈಲಿನ ನಿಯಮ ಮೀರಿ ಬಿಡಿ, ಸಿಗರೇಟ್, ಗುಟ್ಕಾ ಸಂಗ್ರಹಿಸಲಾಗಿತ್ತು. ಅಲ್ಲದೆ ಮೊಬೈಲ್ ಬಳಕೆ ಆರೋಪದ ಅಡಿ ಎಫ್ಐಆರ್ ದಾಖಲಿಸಲಾಗಿದೆ. ಕಲಬುರ್ಗಿಯ ಫಾರತಾಬಾದ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿಸಲಾಗಿದೆ. ಕೈದಿಗಳಾದ ಸುನಿಲ್, ನಾಗೇಶ್, ವಿಶಾಲ್, ಜುಲ್ಬೀಕರ್, ಜಮೀರ್, ಸಾಗರ್ ಸೇರಿದಂತೆ ಏಳು ಕೈದಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನಿನ್ನೆ ಪೊಲೀಸ್ ಆಯುಕ್ತ ಡಾ. ಶರಣಪ್ಪ ನೇತೃತ್ವದಲ್ಲಿ ಜೈಲಿನ ಮೇಲೆ ದಾಳಿ ನಡೆದಿತ್ತು. ಈ ವೇಳೆ ಜೈಲಿನಲ್ಲಿ ಎರಡು ಮೊಬೈಲ್, ಗುಟ್ಕಾ ಹಾಗೂ ಎರಡು ರಾಡ್ಗಳು ಸಿಕ್ಕಿದ್ದವು ಈ ವೇಳೆ ಅವೆಲ್ಲ ವಸ್ತುಗಳನ್ನು ಮಾಡಿಕೊಂಡಿದ್ದರು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಫರತಾಬಾದ್ ಪೊಲೀಸ್ ಠಾಣೆಯಲ್ಲಿ 7 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.