ವಿಜಯಪುರ : ಹಳೆ ಹುಬ್ಬಳ್ಳಿ ಗಲಭೆ ಪ್ರಕರಣ ಪಡೆದ ವಿಚಾರವಾಗಿ, ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದು, ಇದರಲ್ಲಿ ನನ್ನ ಕೇಸ್ ಕೂಡ ಪಡೆದಿದ್ದಾರೆ ಅಂತ ಹೇಳಿದ್ದಾರೆ. ಹಾಗಾದರೆ ನನ್ನ ಮೇಲೆ ಯಾವ ಕೇಸ್ ಇತ್ತು? ಯಾರು ಅರ್ಜಿ ಹಾಕಿದ್ದರು ಎಂಬುದನ್ನು ಬಹಿರಂಗಪಡಿಸಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
ವಿಜಯಪುರದಲ್ಲಿ ಎಂಎಲ್ಸಿ ಸಿಟಿ ರವಿ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ನವರು ಸುಳ್ಳು ಬುರುಕರು ಸುಳ್ಳು ಹೇಳಿದ್ದಾರೆ.ನನ್ನ ಮೇಲೆ ಯಾವುದೇ ಒಂದು ಮೊಕದ್ದಮೆ ಇರಲಿಲ್ಲ. ನಾನು ಯಾವುದೇ ಅರ್ಜಿ ಈ ಸರ್ಕಾರಕ್ಕೆ ಕೊಟ್ಟಿಲ್ಲ. ನನ್ನ ಯಾವ ಪ್ರಕರಣ ಇಂಪಾರ್ಟೆಂಟ್ ಇಲ್ಲ. ಜನರ ದಿಕ್ಕು ತಪ್ಪಿಸಲು ನನ್ನ ಕೇಸ್ ಬಗ್ಗೆ ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಸಿಟಿ ರವಿ ಕೇಸ್ ಸಹ ಹಿಂಪಡೆದಿದ್ದೇವೆ ಅಂತ ಹೇಳಿದ್ದಾರೆ. ನಮಗೆ ಇವರ ಕೃಪೆ ಬೇಡ.ನನ್ನ ವಿರುದ್ಧದ ಕೆ ಎಸ್ ಹಿಂಪಡೆದ ಆದೇಶದ ಪ್ರತಿ ಕೊಡಿ ನನ್ನ ಮೇಲೆ ಪೊಲೀಸ್ ಠಾಣೆಯಲ್ಲಿ ಯಾವ ಕೇಸ್ ಇತ್ತು? ಯಾರು ಅರ್ಜಿ ಕೊಟ್ಟಿದ್ದು? ಎಂದು ಹೇಳಿದರೆ ಬಹಿರಂಗಪಡಿಸಿದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ತಿಳಿಸಿದರು.