ವಿಜಯಪುರ : ವಕ್ಫ್ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಶಾಸಕ ಬಸನಗೌಡ ಪಾಟೀಲ ವಾಕ್ಸಮರ ತಾರಕಕ್ಕೆ ಏರಿದ್ದು, ಸಚಿವ ಜಮೀರ್ ಅಹ್ಮದ್ ಖಾನ್ ಅಪ್ಪ ಯಾರೆಂಬುದೇ ಅವರಿಗೆ ಗೊತ್ತಿಲ್ಲ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದರು.
ವಿಜಯಪುರದಲ್ಲಿ ನಡೆದ ಹಿಂದೂ ಆಸ್ತಿಗಳ ಸಂರಕ್ಷಣೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಚಿವ ಜಮೀರ್ ಅಹ್ಮದ್ ಅವರ ಅಪ್ಪ ಯಾರೆಂಬುದೇ ಅವರಿಗೆ ಗೊತ್ತಿಲ್ಲ. ನಿನ್ನ ಮತ್ತಜ್ಜನ ಹೆಸರು ಮಲ್ಲಪ್ಪ ಅಥವಾ ಕಲ್ಲಪ್ಪ ಇತ್ತೋ ಗೊತ್ತಿಲ್ಲ. ಹಿಂದೂಸ್ಥಾನದಲ್ಲಿ ಇರುವ ಎಲ್ಲ ಮುಸ್ಲಿಮರು ಔರಂಗಜೇಬ, ಟಿಪ್ಪು ಸುಲ್ತಾನ ಹಾಗೂ ಆದಿಲ್ ಶಹಾನ ಖಡ್ಗಕ್ಕೆ ಹೆದರಿಕೊಂಡು ಮತಾಂತರ ಆದವರು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ವಕ್ಫ್ ಬೋರ್ಡ್ ಆಸ್ತಿ ಯತ್ನಾಳ್ ಅವರಪ್ಪನ ಆಸ್ತಿಯಲ್ಲ ಎಂದು ಹೇಳಿದ್ದಾರೆ. ನೀನು ನಮ್ಮಪ್ಪನ ಆಸ್ತಿಯಲ್ಲ. ನಿನ್ನ ಮತ್ತಜ್ಜನ ಹೆಸರು ಮಲ್ಲಪ್ಪ ಅಥವಾ ಕಲ್ಲಪ್ಪ ಇತ್ತೋ ಗೊತ್ತಿಲ್ಲ. ನಿವೇನು ಹಿಂದೂಸ್ಥಾನದಲ್ಲಿ ಇದ್ದೀರಲ್ಲ ಎಲ್ಲ ಮುಸ್ಲಿಮರು ಔರಂಗಜೇಬ, ಟಿಪ್ಪು ಸುಲ್ತಾನ ಹಾಗೂ ಆದಿಲ್ ಶಹಾನ ಖಡ್ಗಕ್ಕೆ ಹೆದರಿಕೊಂಡು ಮುಸ್ಲಿಂ ಆಗಿದ್ದೀರಿ. ಎಂದು ವಾಗ್ದಾಳಿ ನಡೆಸಿದರು.
ಆದರೆ ನಮ್ಮ ಹಿರಿಯರು ಮುತ್ತಜ್ಜರು ಯಾವುದಕ್ಕೂ ಹೆದರದೇ ಹಿಂದೂಗಳಾಗಿಯೇ ಉಳಿದುಕೊಂಡು ವಿಭೂತಿ ಕುಂಕುಮ ಹಚ್ಚಿಕೊಂಡು ಎಲ್ಲವನ್ನೂ ಎದುರಿಸಿ ಬಂದಿದ್ದಾರೆ. ಅವರು ನಿಜವಾದ ಹಿಂದೂ ಹುಲಿಗಳು. ನಿಮ್ಮಪ್ಪನೇ ಕಂಟ್ರಿ ಇದ್ದಾನೆ. ನೀವೇನು ಅರಬ್ ಕಂಟ್ರಿಯವರಿಗೆ ಹುಟ್ಟಿಲ್ಲ ಎಂದು ಹೇಳಿದರು.