ಬೆಂಗಳೂರು : 2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಿಂದ ಪ್ರಥಮ ಬಾರಿಗೆ ಚಾರ್‌ಧಾಮ್ ಯಾತ್ರೆಯನ್ನು ಕೈಗೊಂಡ ಯಾತ್ರಾರ್ಥಿಗಳಿಗೆ ತಲಾ ರೂ.20,000/-ಗಳಂತೆ ಸರ್ಕಾರದ ಸಹಾಯಧನವನ್ನು ನೀಡುವ ಕುರಿತು ಅರ್ಜಿಗಳನ್ನು ದಿನಾಂಕ: 03.10.2024ರಿಂದ ಆಹ್ವಾನಿಸಲಾಗಿದೆ.
ಆರ್ಹತಗಳು:
1. ಯಾತಾರ್ಥಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
2. 45 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು.
3. ಯಾತ್ರಾರ್ಥಿಯು ಕಡ್ಡಾಯವಾಗಿ, ಬದರೀನಾಥ್, ಕೇದಾರ್‌ನಾಥ್, ಯಮುನೋತ್ರಿ ಮತ್ತು ಗಂಗೋತ್ರಿ ಕ್ಷೇತ್ರಗಳಿಗೆ ಭೇಟಿ ನೀಡಿರಬೇಕು.
4. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15.01.2025 ಸಂಜೆ 4:00 ಗಂಟೆ.
5. ಅನುದಾನ ಲಭ್ಯತೆಗೆ ಅನುಗುಣವಾಗಿ ಸರ್ಕಾರದ ಮಾರ್ಗಸೂಚಿಯನ್ವಯ ಅನುದಾನವನ್ನು ವಿಕರಿಸಲಾಗುವುದು.
6. ‘ತಾತ್ರಾರ್ಥಿ೦ತರು ಆನ್‌ಲೈನ್ ಮೂಲಕ ಅರ್ಜಿಯನ್ನು https://sevasindhuservices.karnataka.gov.in .
ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಆನ್ ಲೋಡ್ ಮಾಡಬೇಕಾದ ದಾಖಲೆಗಳು
1. ಒಂದು ಭಾವಚಿತ್ರ (ಪಾಸ್‌ಪೋರ್ಟ್ ಅಳತೆ)
2. ಆಧಾರ್ ಕಾರ್ಡ್ ಎರಡೂ ಕಡೆ (both sides) ತಪ್ಪದೇ ಅಪ್ ಲೋಡ್ ಮಾಡತಕ್ಕದ್ದು.
3. ಚುನಾವಣಾ ಗುರುತಿನ ಚೀಟಿ/ರೇಷನ್ ಕಾರ್ಡ್
4. ಯಾತ್ರಾರ್ಥಿಯು ರೂ.50/-ಗಳ ದಾಸಾ ಕಾಗದ (E-Stamp Paper) ದಲ್ಲಿ ಈ ಹಿಂದೆ ಸಹಾಯಧನವನ್ನು ಪಡೆದಿಲ್ಲವೆಂದು ಸ್ವದೃಢೀಕರಿಸಿ ನೋಟರಿ ಮೊಹರು ಮತ್ತು ಸಹಿಯೊಂದಿಗೆ ದೃಢೀಕರಣವನ್ನು ಅಪ್ ಲೋಡ್ ಮಾಡತಕ್ಕದ್ದು.
5. | ಯಾತ್ರೆ ಕೈಗೊಳ್ಳುವ ಮುನ್ನ ಯಾತ್ರೆಗೆ ನೋಂದಾಯಿಸಿಕೊಂಡ ಪ್ರತಿ
6. ಯಾತ್ರೆ ಮುಗಿದ ನಂತರ ಉತ್ತರಖಂಡ್ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ನೀಡಲಾದ ಪ್ರಮಾಣ ಪತ್ರ (ಕಡ್ಡಾಯವಾಗಿ 4 ಧಾಮಗಳು ನಮೂದಾಗಿರತಕ್ಕದ್ದು).
7. ಯಾತ್ರಾರ್ಥಿಯು ಅರ್ಜಿ ಸಲ್ಲಿಸುವ ಮುನ್ನ ಅವರ ಬ್ಯಾಂಕ್ ಖಾತೆಯು ಚಾಲ್ತಿಯಲ್ಲಿರಬೇಕು. ಸದರಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ತಪ್ಪದೇ Seed ಹಾಗೂ NPCI Active ಮಾಡಿಸಿರತಕ್ಕದ್ದು. (ಸರ್ಕಾರದ ಮಾರ್ಗಸೂಚಿಯನ್ವಯ ಆಯಾಯಾ ವರ್ಷದ ಅನುದಾನವನ್ನು ಆಯಾಯಾ ವರ್ಷ ಪಾವತಿಸಲು ಅವಕಾಶವಿರುವುದರಿಂದ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ತಪ್ಪದೇ Seed ಹಾಗೂ NPCI Active ಅನ್ನು ನಿಗದಿತ ದಿನಾಂಕದೊಳಗೆ ಮಾಡಿಸದಿದ್ದಲ್ಲಿ ತಾವೇ ನೇರ ಜವಾಬ್ದಾರರು) ಅವಧಿ ಮುಗಿದ ನಂತರ ಸಹಾಯಧನ ಕೋರಿ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಸೂಚನೆ:- ಹೆಚ್ಚಿನ ವಿವರಗಳನ್ನು ಇಲಾಖೆಯ ಅಧಿಕೃತ ವೆಬ್ ಸೈಟ್ https://tims.kar.nic.in ನಲ್ಲಿ ಪಡೆದುಕೊಳ್ಳಬಹುದಾಗಿದೆ.