ಬೆಂಗಳೂರು: ಸೈಬರ್ ಕ್ರೈಂ ವಂಚನೆ ಎಸಗಿದಂತ ಆಕ್ಸಿಸ್ ಬ್ಯಾಂಕ್ ನೌಕರ ಸೇರಿದಂತೆ 8 ವಂಚಕರನ್ನು ಬೆಂಗಳೂರು ಸಿಟಿ ಪೊಲೀಸರು ಎಡೆಮುರಿ ಕಟ್ಟಿ ಬಂಧಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ಸಿಟಿ ಪೊಲೀಸರು ಮಾಹಿತಿ ನೀಡಿದ್ದು, ದಿನಾಂಕ:01/07/2024 ರಂದು ಯಲಹಂಕ ವಾಸಿಯಾದ ಪಿರಾದುದಾರರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರನ್ನು ಮಾರ್ಚೆ-2024 ನೇ ಸಾಲಿನಲ್ಲಿ ಒಂದು ವ್ಯಾಟ್ಸ್ ಆಫ್ ಗ್ರೂಪ್ನ ಸದಸ್ಯರನ್ನಾಗಿ ಸೇರಿಸಿಕೊಂಡಿದ್ದು, ಗ್ರೂಪ್ ಮೆಸೆಜ್‌ನಲ್ಲಿ ಷೇರ್ ಬ್ರೆಡಿಂಗ್ ಬಗ್ಗೆ ತರಬೇತಿಯನ್ನು ನೀಡಿ, ನಂತರ ವಿ.ಐ.ಪಿ ಟ್ರೇಡಿಂಗ್ ಅಕೌಂಟ್‌ನಲ್ಲಿ ಹಣವನ್ನು ಹೂಡಿದರೆ ಹತ್ತು ಪಟ್ಟು ಹೆಚ್ಚಿನ ಹಣವನ್ನು ನೀಡುವುದಾಗಿ ಆಮಿಷವೊಡ್ಡಿರುತ್ತಾರೆ ಎಂದಿದೆ.
ಪಿರಾದುದಾರರು ಈ ಆಮಿಷಕ್ಕೆ ಒಳಗಾಗಿ ಮೊದಲು 50 ಸಾವಿರ ಹಣವನ್ನು ವಿ.ಐ.ಪಿ ಟ್ರೇಡಿಂಗ್ ಅಕೌಂಟ್‌ಗೆ ಜಮಾ ಮಾಡಿದ ನಂತರ, ಏರಾದುದಾರರ ವಿ.ಐ.ಪಿ ಟ್ರೇಡಿಂಗ್ ಅಕೌಂಟ್‌ನಲ್ಲಿ ಹಣ ದ್ವಿಗುಣವಾಗಿರುವುದಾಗಿ ಮೇಸೆಜ್ ಬಂದಿರುತ್ತದೆ. ಹಾಗೂ ಪಿರಾದುದಾರರಿಗೆ ಮೇಲಿಂದ ಮೇಲೆ ಹಣವನ್ನು ಮತ್ತಷ್ಟು ಹೂಡುವಂತೆ ವ್ಯಾಟ್ಸ್ ಆಫ್ ಮುಖಾಂತರ ಒತ್ತಡವನ್ನು ಹೇರಿರುತ್ತಾರೆ. ಹೀಗೆ ಹಂತ ಹಂತವಾಗಿ ಪಿರಾದುದಾರರ ಕಡೆಯಿಂದ ಮಾರ್ಚಿ-2024ನೇ ಸಾಲಿನಿಂದ ಜೂನ್-2024 ರ ಅವದಿಯಲ್ಲಿ ಒಟ್ಟು 11.5 ಕೋಟಿ ಹಣವನ್ನು ವಿವಿಧ ಬ್ಯಾಂಕ್ ಅಕೌಂಟ್‌ಗಳಿಗೆ ಹೂಡಿಕೆ ಮಾಡಿಸಿಕೊಂಡಿರುತ್ತಾರೆ ಎಂದು ತಿಳಿಸಿದೆ.
ಪಿರಾದುದಾರರು – ವಿ.ಐ.ಪಿ ಟ್ರೇಡಿಂಗ್ ಅಕೌಂಟ್‌ನಲ್ಲಿ ಹೂಡಿಕೆ ಮಾಡಿದ ಹಣಕ್ಕೆ 3 28 ಕೋಟಿ ಆಗಿರುವುದಾಗಿ ವ್ಯಾಟ್ಸ್ ಆಫ್‌ನಲ್ಲಿ ತೋರಿಸಿ, ಈ ಹಣವನ್ನು ಪಿರಾದುದಾರರು ಹಿಂಪಡೆಯಬೇಕಾದರೆ ಸರ್ವ ಮ್ಯಾನೆಜ್‌ಮೆಂಟ್ ಫೀ ಅದ 175 ಲಕ್ಷ ಹಣವನ್ನು ಸಂದಾಯ ಮಾಡಿದರೆ ಮಾತ್ರ 1 28 ಕೋಟಿ ಹಣವನ್ನು ಪಿರಾದುದಾರರು ಹಿಂಪಡೆಯಬಹುದೆಂದು ತಾಕೀತು ಮಾಡಿರುತ್ತಾರೆ. ಈ ಕುರಿತು ಅನುಮಾನಗೊಂಡ ಪಿರಾದುದಾರರು ತಾನು ಮೋಸಗೊಂಡಿರುವ ಬಗ್ಗೆ ಅರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿರುತ್ತದೆ ಎಂದು ಹೇಳಿದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು, ಪಿರಾದುದಾರರ ಹೂಡಿಕೆ ಮಾಡಿದ್ದ ವಿವಿಧ ಬ್ಯಾಂಕ್ ಖಾತೆಯ ವಿವರವನ್ನು ಪಡೆದುಕೊಂಡು ಎನ್.ಸಿ.ಆರ್.ಪಿ- 1930 ಪೋರ್ಟಲ್‌ನಲ್ಲಿ ಎರಡು ಕರೆಂಟ್ ಆಕೌಂಟ್‌ಗಳು ಬೆಂಗಳೂರಿನ ನಾಗರಭಾವಿ ಆಕ್ಸಿಸ್ ಬ್ಯಾಂಕ್ ಶಾಖೆಯದಾಗಿದ್ದು, ಈ ಖಾತೆದಾರರು ಚಿಕ್ಕಮಗಳೂರಿನವರಾಗಿದ್ದರಿಂದ, ತನಿಖಾಧಿಕಾರಿಗಳು ನಾಗರಭಾವಿ ಆಕ್ಸಿಸ್ ಬ್ಯಾಂಕ್ ಶಾಖೆಯ ಮ್ಯಾನೇಜರ್‌ನನ್ನು ವಿಚಾರಣೆ ಮಾಡಲಾಗಿ ಕರೆಂಟ್ ಅಕೌಂಟ್ ದಾರರು
ಬೆಂಗಳೂರಿನಲ್ಲಿ ವಾಸಿಸುವ ಬಗ್ಗೆಯಾಗಲೀ ಅಥವಾ ಬಿಸಿನೆಸ್ ಮಾಡುವ ಬಗ್ಗೆಯಾಗಲೀ ದಾಖಲೆಗಳನ್ನು ಸಲ್ಲಿಸಿರುವುದಿಲ್ಲವೆಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುತ್ತದೆ ಎಂದಿದ್ದಾರೆ.
ಮುಂದುವರೆದು ಅದೇ ಬ್ಯಾಂಕ್‌ನಲ್ಲಿ ಇನ್ನೂ ನಾಲ್ಕು ಬ್ಯಾಂಕ್ ಖಾತೆಗಳು ಇದೇ ರೀತಿ ತೆರೆದಿದ್ದು, ತನಿಖೆಯಿಂದ ತಿಳಿದು ಬಂದಿದ್ದು, ಈ ಮೇಲ್ಕಂಡ ಎಲ್ಲಾ ಅರು ಬ್ಯಾಂಕ್ ಖಾತೆಗಳಿಗೆ ಒಟ್ಟು 297 ಕೋಟಿ ಹಣದ ವಹಿವಾಟು ನಡೆದಿರುವ ಬಗ್ಗೆ ತನಿಖೆಯಿಂದ ತಿಳಿದುಬಂದಿರುತ್ತದೆ. ಈ ಬಗ್ಗೆ ಆಕ್ಸಿಸ್ ಬ್ಯಾಂಕ್ ಶಾಖೆಯ ಮ್ಯಾನೇಜರ್ ಹಾಗೂ ಮೂವರು ಸೇಲ್ಸ್ ಎಕ್ಸಿಕ್ಯೂಟಿವ್ ರವರುಗಳು ಶಾಮಿಲಾಗಿರುವ ಬಗ್ಗೆ ತನಿಖೆಯಿಂದ ದೃಢಪಟ್ಟಿದ್ದರಿಂದ, ಹಾಗೂ ಅವರುಗಳು ತನ್ನೊಪ್ಪಿಕೊ೦ಡಿದ್ದರಿಂದ, ದಿನಾಂಕ:26/09/2024 ರಂದು ಮ್ಯಾನೇಜರ್ ಹಾಗೂ ಮೂವರು ಸೇಲ್ಸ್ ಎಕ್ಸಿಕ್ಯೂಟಿವ್ ರವರುಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು ಎಂದು ತಿಳಿಸಿದೆ.
ದಿನಾಂಕ:27/09/2024 ರಂದು ನಾಲ್ವರು ಆರೋಪಿಗಳನ್ನು ಮಾನ್ಯ ನ್ಯಾಯಾಲಕ್ಕೆ ಹಾಜರುಪಡಿಸಿ, 12 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆಯಲಾಯಿತು. ಪೊಲೀಸ್’ ಅಭಿರಕ್ಷೆಗೆ ಪಡೆದ ಆರೋಪಿಗಳೆಲ್ಲರನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ, ಆರು ಕರೆಂಟ್ ಅಕೌಂಟ್ ಖಾತೆದಾರರು ಚಿಕ್ಕಮಗಳೂರಿನಲ್ಲಿ ವಾಸಿಸುತ್ತಿರುವುದಾಗಿ ಮಾಹಿತಿಯನ್ನು ನೀಡಿರುತ್ತಾರೆ ಎಂದು ಹೇಳಿದೆ.
ದಿನಾಂಕ:29/09/2024 ರಂದು ಈ ಪ್ರಕರಣದಲ್ಲಿ ಕರೆಂಟ್ ಅಕೌಂಟ್ ಖಾತೆದಾರರ ಪೈಕಿ ಓರ್ವ ಮಹಿಳೆಯೂ ಸೇರಿದಂತೆ ನಾಲ್ವರು ಆರೋಪಿಗಳನ್ನು ಚಿಕ್ಕಮಗಳೂರಿನಲ್ಲಿ ವಶಕ್ಕೆ ಪಡೆಯಲಾಯಿತು. ಅವರುಗಳನ್ನು ವಿಚಾರಣೆಗೊಳಪಡಿಸಿದಾಗ, ನಾಲ್ವರು ಆರೋಪಿಗಳು ಮತ್ತೋರ್ವ ಸಹಚರನ ಬಗ್ಗೆ ಮಾಹಿತಿಯನ್ನು ನೀಡಿದ್ದು, ಆ ಮತ್ತೋರ್ವ ವ್ಯಕ್ತಿಯು, ಆರೋಪಿಗಳ ಖಾತೆಯಲ್ಲಿ ಹೆಚ್ಚು ಹಣದ ವಹಿವಾಟು ಮಾಡಿದರೆ, ಅದಕ್ಕನುಗುಣವಾಗಿ ಖಾತೆದಾರರಿಗೆ ಕಮಿಷನ್ ರೂಪದಲ್ಲಿ ಹಣವನ್ನು ನೀಡುವುದಾಗಿ ಆಮಿಷವೊಡ್ಡಿ. ಆರೋಪಿಗಳು ತೆರೆದಿದ್ದ ಕರೆಂಟ್ ಅಕೌಂಟ್‌ನ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿರುತ್ತಾನೆ. ಈ ರೀತಿ ಆರು ಕರೆಂಟ್ ಆಕೌಂಟ್‌ನ ಮಾಹಿತಿಯನ್ನು ಪಡೆದಿದ್ದ ಮತ್ತೋರ್ವ ವ್ಯಕ್ತಿಯು ಒಟ್ಟು 1 97 ಕೋಟಿ ಹಣದ ವ್ಯವಹಾರವನ್ನು ಮಾಡಿರುತ್ತಾನೆ. ಮತ್ತೋರ್ವ ವ್ಯಕ್ತಿಯು ಹಾಗೂ ಇಬ್ಬರು ಬ್ಯಾಂಕ್ ಖಾತೆದಾರರು ತಲೆಮರೆಸಿಕೊಂಡಿರುತ್ತಾರೆ. ತನಿಖೆ ಮುಂದುವರೆದಿದೆ ಎಂದು ತಿಳಿಸಿದೆ.
ದಿನಾಂಕ: 30/09/2024 ರಂದು ಚಿಕ್ಕಮಗಳೂರಿನಲ್ಲಿ ವಶಕ್ಕೆ ಪಡೆದಿದ್ದ ನಾಲ್ವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ. ದಿನಾಂಕ:08/10/2024 ರಂದು ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಹಾಗೂ ಮೂವರು ಸೇಕ್ಸ್ ಎಕ್ಸಿಕ್ಯೂಟಿವ್‌ರವರುಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ, ಈ ಆರು ಖಾತೆಗಳ ಬಗ್ಗೆ ಎನ್.ಸಿ.ಆರ್.ಪಿ-1930 ಪೋರ್ಟಲ್‌ನಲ್ಲಿ ಪರಿಶೀಲಿಸಿದಾಗ ಭಾರತ ದೇಶದ್ವಾಂತ ಒಟ್ಟು 254 ಪ್ರಕರಣಗಳು ದಾಖಲಾಗಿರುತ್ತವೆ. ಹಾಗೂ ಇವುಗಳ ಮೊತ್ತ 1 97 ಕೋಟಿ ಹಣದ ವಹಿವಾಟು ಮಾಡಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ ಎಂದಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಬ್ಯಾಂಕ್ ಖಾತೆ ಹೊಂದಿರುವ ಇಬ್ಬರು ವ್ಯಕ್ತಿಗಳು, ಖಾತೆಯನ್ನು ತೆರೆಯಲು ಆಮಿಷವೊಡ್ಡಿದ ಮತ್ತೋರ್ವ ವ್ಯಕ್ತಿಯು ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಆರು ವ್ಯಕ್ತಿಗಳು ಸೇರಿದಂತೆ ಒಟ್ಟು ಒಂಬತ್ತು ಆರೋಪಿಗಳು ತಲೆಮರೆಸಿಕೊಂಡಿದ್ದು, ಇವರುಗಳು ಹೊರರಾಜ್ಯ ಹಾಗೂ ವಿದೇಶದಲ್ಲಿದ್ದು, ಇವರುಗಳ ಪತ್ತೆ ಕಾರ್ಯ ಮುಂದುವರೆದಿದೆ.
ಈ ಪ್ರಕರಣದಲ್ಲಿ ಕಾರ್ಯಾಚರಣೆಯನ್ನು ಹೆಚ್ಚುವರಿ ಪೊಲೀಸ್ ಆಯುಕ್ತರು (ಅಪರಾದಗಳು)ಚಂದ್ರಗುಪ್ತ, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಉಪ ಪೊಲೀಸ್ ಆಯುಕ್ತರು (ಅಪರಾದಗಳು) ಅಬ್ದುಲ್ ಅಹದ್, ಐ.ಪಿ.ಎಸ್. ರವರ ನೇತೃತ್ವದಲ್ಲಿ, ಹಜರೇಶ್ ಕಿಲೆದಾರ್, ಪೊಲೀಸ್ ಇನ್ಸ್ಪೆಕ್ಟರ್. ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ/ಸಿಬ್ಬಂದಿಯವರು ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ ಎಂದು ಹೇಳಿದೆ.
BIG NEWS: ‘ಜಾತಿ ಗಣತಿ ವರದಿ’ ಮಂಡನೆಯಾಗಬೇಕಿದ್ದ ‘ರಾಜ್ಯ ಸಚಿವ ಸಂಪುಟ ಸಭೆ’ 1 ವಾರ ಮುಂದೂಡಿಕೆ
‘ದೋಸೆ ಪ್ರಿಯ’ರಿಗೆ ಗುಡ್ ನ್ಯೂಸ್: ಶೀಘ್ರವೇ KMFನಿಂದ ‘ನಂದಿನಿ ದೋಸೆ ಹಿಟ್ಟು’ ಬಿಡುಗಡೆ