ಬೆಂಗಳೂರು: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿಯನ್ನು ಮಂಡಿಸಿ, ಚರ್ಚಿಸಿದ ಬಳಿಕ ಜಾರಿಯ ನಿರ್ಧಾರ ಪ್ರಕಟಿಸುವುದಾಗಿ ಸಿಎಂ ಸಿದ್ಧರಾಮಯ್ಯ ಘೋಷಿಸಿದ್ದರು. ಈ ಕಾರಣಕ್ಕಾಗಿಯೇ ಅಕ್ಟೋಬರ್.18ರಂದು ರಾಜ್ಯ ಸಚಿವ ಸಂಪುಟ ಸಭೆಯನ್ನು, ಅಕ್ಟೋಬರ್.25ಕ್ಕೆ ಮುಂದೂಡಿಕೆ ಮಾಡಲಾಗಿದೆ.
ಅಕ್ಟೋಬರ್.7, 2024ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜಾತಿ ಗಣತಿ ವರದಿ ಅನುಷ್ಠಾನ ಸಂಬಂಧ ಹಿಂದುಳಿದ ವರ್ಗಗಳ ಸಚಿವರು, ಶಾಸಕರ ಸಭೆ ನಡೆಸಿದ್ದರು. ಈ ಸಭೆಯ ಬಳಿಕ ಅಕ್ಟೋಬರ್.18ರಂದು ನಡೆಯಲಿರುವಂತ ಸಚಿವ ಸಂಪುಟ ಸಭೆಯಲ್ಲೇ ಜಾತಿ ಗಣತಿ ವರದಿಯನ್ನು ಮಂಡಿಸೋದಾಗಿ ಘೋಷಿಸಿದ್ದರು.
ಆದರೇ ಅಕ್ಟೋಬರ್.17ರಂದು ವಾಲ್ಮೀಕಿ ಜಯಂತಿ ಕಾರಣ ಅಕ್ಟೋಬರ್.18ಕ್ಕೆ ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿತ್ತು. ಆದರೇ ಜಾತಿ ಗಣತಿ ವರದಿ ಮಂಡನೆ, ಅದರ ಮೇಲಿನ ಚರ್ಚೆಯ ಕಾರಣದಿಂದ ಈಗ ರಾಜ್ಯ ಸಚಿವ ಸಂಪುಟ ಸಭೆಯನ್ನು ಅಕ್ಟೋಬರ್.25ಕ್ಕೆ ನಿಗದಿ ಪಡಿಸಿ ಒಂದು ವಾರ ಮುಂದೂಡಲಾಗಿದೆ.
‘ದೋಸೆ ಪ್ರಿಯ’ರಿಗೆ ಗುಡ್ ನ್ಯೂಸ್: ಶೀಘ್ರವೇ KMFನಿಂದ ‘ನಂದಿನಿ ದೋಸೆ ಹಿಟ್ಟು’ ಬಿಡುಗಡೆ