ಬೆಂಗಳೂರು: ನಗರದ ಜನತೆಯ ಅನುಕೂಲಕ್ಕಾಗಿ ಬಿಎಂಟಿಸಿಯಿಂದ ಟಿನ್ ಫ್ಯಾಕ್ಟರಿ ಟು ವಿಜಯಪುರ ನಡುವೆ ಹೊಸ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸಲಾಗಿದೆ.
ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತಿಳಿಸಿದ್ದು, ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದಿದೆ.
ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಮಾರ್ಗವನ್ನು ದಿನಾಂಕ: 16.10.2024 ರಿಂದ ಪರಿಚಯಿಸುತ್ತಿದ್ದು ವಿವರ ಕೆಳಕಂಡಂತಿದೆ ಎಂದು ಹೇಳಿದೆ.
ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಮಾರ್ಗವನ್ನು ದಿನಾಂಕ: 16.10.2024 ರಿಂದ ಪರಿಚಯಿಸುತ್ತಿದ್ದು ವಿವರ ಕೆಳಕಂಡಂತಿದೆ :
ಮಾರ್ಗ ಸಂಖ್ಯೆ | ಎಲ್ಲಿಂದ | ಎಲ್ಲಿಗೆ | ಮಾರ್ಗ | ಬಸ್ಸುಗಳ ಸಂಖ್ಯೆ |
316-ಝಡ್ | ಟಿನ್‌ಫ್ಯಾಕ್ಟರಿ | ವಿಜಯಪುರ | ಕೆ.ಆರ್.ಪುರ, ಬೂದಿಗೆರೆ, ನಲ್ಲೂರು, ಚನ್ನರಾಯಪಟ್ಟಣ | 2 |
ಸದರಿ ಮಾರ್ಗದ ವೇಳಾಪಟ್ಟಿ ಈ ಕೆಳಕಂಡಂತಿದೆ.
ಬಿಡುವ ವೇಳೆ | ||
ಟಿನ್‌ಫ್ಯಾಕ್ಟರಿ | ವಿಜಯಪುರ | |
0955, 1055, 1440, 1540 | 0800, 0900, 1150, 1250 |