ಹುಬ್ಬಳ್ಳಿ : ಮಹಿಳಾ ರೈತ ಮುಖಂಡೆಯ ಮೇಲೆ ಶಾಸಕ ವಿನಯ ಕುಲಕರ್ಣಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ಮಹಿಳೆ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ದೂರು ದಾಖಲಿಸಿದ್ದರು.ಇದೀಗ ವಿನಯ್ ಕುಲಕರ್ಣಿ ಅವರ ಆಪ್ತ ಸಂತ್ರಸ್ತೆ ಮಹಿಳೆಯ ವಿರುದ್ಧವೇ ಪ್ರತಿ ದೂರು ದಾಖಲಿಸಿದ್ದಾರೆ.
ಹೌದು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಶಾಸಕ ವಿನಯ್ ಕುಲಕರ್ಣಿ ಹಾಗೂ ಆಪ್ತ ಅರ್ಜುನ್ ಗುಡ್ಡದ ವಿರುದ್ಧ ಮಹಿಳೆ ದೂರ ಸಲ್ಲಿಸಿದ್ದರು. ಇದೀಗ ಅರ್ಜುನ್ ಗುಡ್ಡದ ಅವರು ಮಹಿಳೆ ತಮಗೆ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಳು ಎಂದು ಆರೋಪಿಸಿ ಹುಬ್ಬಳ್ಳಿಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ.
ನಾನು ಹತ್ತಿ ಬೀಜದ ಕಂಪನಿಯ ಬ್ರಾಂಡ್ ಅಂಬಾಸಿಡರ್ ಎಂದು ಅರ್ಜುನ್ಗೆ ಮಹಿಳೆ ಪರಿಚಯವಾಗಿದ್ದಾರೆ. ಬಳಿಕ ನಕಲಿ ಫೋಟೋ ತೋರಿಸಿ ಹಣಕ್ಕೆ ಬ್ಲ್ಯಾಕ್ಮೇಲ್ ಆರೋಪ ಮಾಡಿದ್ದಾರೆ.20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ರೈತ ಹೋರಾಟಗಾರ್ತಿ ವಿರುದ್ಧ ದೂರು ದಾಖಲಾಗಿದೆ.ಮಂಜುಳಾ ಪೂಜಾರ್, ಜಗದೀಶ್, ಹನುಮಂತಪ್ಪ ಹಾಗೂ ಸಿದ್ದಪ್ಪ ಎಂಬುವರ ವಿರುದ್ದ ಹುಬ್ಬಳ್ಳಿಯ ಗೋಕುಲ ರೋಡ್ ಠಾಣೆಯಲ್ಲಿ IPC 1860,U/S 384,506 ಅಡಿಯಲ್ಲಿ ದೂರು ದಾಖಲಿಸಿದ್ದಾರೆ.