ಬೆಂಗಳೂರು : ಉದ್ಯಮಿ ವಿಜಯ್ ತಾತಾಗೆ ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಅವರು 50 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್ ಡಿ ಕುಮಾರಸ್ವಾಮಿ ಅವರು ಹೈಕೋರ್ಟಿಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಈ ಒಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.
ಹೌದು ಉದ್ಯಮಿ ವಿಜಯ್ ತಾತಾಗೆ ಎಚ್ ಡಿ ಕುಮಾರಸ್ವಾಮಿ ಅವರು 50 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದರು.ಅಲ್ಲದೆ ಬೆದರಿಕೆ ಕೂಡ ಹಾಕಿದ್ದರು. ಈ ಒಂದು ಪ್ರಕರಣದಲ್ಲಿ ಎಂಎಲ್ಸಿ ರಮೇಶ್ ಗೌಡ ವಿರುದ್ಧ ಕೂಡ ಬೆಂಗಳೂರಿನ ಅಮೃತ ಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿತ್ತು. ಇದೀಗ ಹೆಚ್‍ಡಿ ಕುಮಾರಸ್ವಾಮಿ ಜಾಮೀನು ನೀಡಿ ಎಂದು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಬಳಿಕ ಹೈಕೋರ್ಟ್ ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಿದೆ.
ಇದಾದ ಬಳಿಕ ಎಂಎಲ್ಸಿ ರಮೇಶ್ ಗೌಡ ಅವರೇ ನನಗೆ 100 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ವಿಜಯ್ ತಾತಾ ವಿರುದ್ಧ ಪ್ರತಿ ದೂರನ್ನು ದಾಖಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಉದ್ಯಮಿ ವಿಜಯ್ ತಾತ ಅವರು,ನಾನು ಯಾರು ಅಂತಾನೇ ಗೊತ್ತಿಲ್ಲ ಅಂತಿದ್ದವರು, ಈಗ ನನ್ನ ವಿರುದ್ಧ ದೂರು ನೀಡಿದ್ದಾರೆ. ಕುಮಾರಸ್ವಾಮಿ ಅವರ ಹತ್ತಿ ನಾನು, 100 ಕೋಟಿ ಕೇಳೋಕೆ ಸಾಧ್ಯವೆ ಎಂದಿದ್ದಾರೆ. ಅಷ್ಟೇ ಅಲ್ಲ, ಹೆಚ್‍ಡಿ ಕುಮಾರಸ್ವಾಮಿ ನನ್ನ ಬಳಿ 50 ಕೋಟಿ ರೂ. ಕೇಳಿ ಬೆದರಿಕೆ ಹಾಕಿದ್ದನ್ನ ನಾನು ಪ್ರೂವ್ ಮಾಡುತ್ತೇನೆ ಎಂದಿದ್ದರು.








