ವಿಜಯಪುರ : ಕರ್ನಾಟಕ ರಾಜ್ಯ ರಾಜಕಾರಣದ ಇತಿಹಾಸವನ್ನು ತಿರುಗಿ ನೋಡಿದಾಗ ಹಲವು ರಾಜಕಾರಣಿಗಳು ಈ ಒಂದು ಸಿಡಿ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು. ಅವರು ಯಾರೆಂದು ಎಲ್ಲರಿಗೂ ಗೊತ್ತಿರುವ ವಿಷಯವೇ. ಹಾಗಾಗಿ ಅವರ ಹೆಸರು ಹೇಳುವ ಅವಶ್ಯಕತೆ ಇಲ್ಲ. ಆದರೆ ಇದೀಗ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಮುಸ್ಲಿಂ ಮುಖಂಡರು ನಿಮ್ಮ ಸಿಡಿ ಕೂಡ ಬಿಡುಗಡೆ ಮಾಡುವುದು ಗ್ಯಾರಂಟಿ ಎಂದು ಎಚ್ಚರಿಕೆ ನೀಡಿದ್ದಾರೆ.
ಹೌದು ನಾಳೆ ವಿಜಯಪುರದಲ್ಲಿ ‘ವಕ್ಫ್ ಹಠಾವೋ ದೇಶ ಬಚಾವೋ’ ಆಂದೋಲನ ಪ್ರತಿಭಟನೆಗೆ ಯತ್ನಾಳ್ ಕರೆ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಮುಸ್ಲಿಂ ಮುಖಂಡರು, ನಿಮ್ಮ ರಾಜಕಾರಣ ಏನು ಇದೆಯೋ ಅದನ್ನು ಮಾಡಿಕೊಂಡು ಹೋಗಿ. ಇಲ್ಲದಿದ್ದರೆ ನವೆಂಬರ್ 6ರಂದು ನಿಮ್ಮ ಸಿಡಿ ಬಿಡುಗಡೆ ಮಾಡುವುದು ಗ್ಯಾರಂಟಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ವಿಚಾರವಾಗಿ ಇಂದು ಮುಸ್ಲಿಂ ಮುಖಂಡರಾದ ಎಸ್ ಎಸ್ ಖಾದ್ರಿ ಅವರು ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ತಿ…ಮುಚ್ಚಿಕೊಂಡು ರಾಜಕಾರಣ ಮಾಡಬೇಕು. ಇಲ್ಲದಿದ್ದರೆ ನವೆಂಬರ್ 06ರಂದು ಸಿಡಿ ಬಿಡುಗಡೆ ಮಾಡುವುದು ಖಚಿತ ಎಂದು ಎಚ್ಚರಿಕೆ ನೀಡಿದರು. ಹಾಗಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಿಡಿ ಕೂಡ ಇದೆಯಾ ಎಂಬ ಅನುಮಾನ ಮೂಡುತ್ತಿದೆ.
ನಾಳೆ ಯತ್ನಾಳ್ ನೇತೃತ್ವದಲ್ಲಿ ಪ್ರತಿಭಟನೆ
ವಕ್ಫ್ ಕಾನೂನು ರದ್ದತಿಗೆ ಒತ್ತಾಯಿಸಿ ನಾಳೆ ಬೆಳಿಗ್ಗೆ 10 ಗಂಟೆಗೆ ಸಿದ್ದೇಶ್ವರ ದೇವಸ್ಥಾನದ ಬಳಿ ಪ್ರತಿಭಟನಾ ಸಮಾವೇಶ ಆಯೋಜನೆ ಮಾಡಲಾಗಿದ್ದು, ಸಾರ್ವಜನಿಕರು ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಗ್ಗಂಟುಗಳನ್ನು ಬಂದ್ ಮಾಡಿ ಹೋರಾಟದಲ್ಲಿ ಭಾಗಿಯಾಗಲು ಯತ್ನಾಳ್ ಕರೆ ಕೊಟ್ಟಿದ್ದಾರೆ.
ಈ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ, ಚಕ್ರವರ್ತಿ ಸೂಲಿಬೆಲೆ ಹಾಗೂ ಇತರರು ಭಾಗಿಯಾಗಲಿದ್ದಾರೆ. ಜಿಲ್ಲೆಯ 12000 ಎಕರೆ, ವಿಜಯಪುರ ತಾಲೂಕಿನ 2643 ಎಕರೆ ಆಸ್ತಿ ವಕ್ಪ ಎಂದು ಎಂಟ್ರಿ ಮಾಡಲು ಸಚಿವ ಜಮೀರ್ ಅಹ್ಮದ್ ಖಾನ್ ಆದೇಶಿಸಿದ್ದಾರೆ. ಸಂಘ-ಸಂಸ್ಥೆಗಳ, ದೇವಸ್ಥಾನಗಳ, ಸರ್ಕಾರಿ ಆಸ್ತಿ ಜಮೀನುಗಳನ್ನು ವಕ್ಪ್ ಆಸ್ತಿ ಎಂದು ಉತಾರೆಯಲ್ಲಿ ಎಂಟ್ರಿ ಮಾಡುವುದನ್ನು ಕೈಬಿಡುವಂತೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.