ಬೆಂಗಳೂರು: ವೈದ್ಯಕೀಯ ವ್ಯಾಸಂಗದ ನಿರೀಕ್ಷೆಯಿಂದ ಯುಜಿ ನೀಟ್-2024ರ ಪರೀಕ್ಷೆ ಬರೆದವರಿಗೆ ಕೋರ್ಸ್ ಗೆ ಶುಲ್ಕ ಪಾವತಿಸಲು ನಾಳೆಯವರೆಗೆ ಅವಧಿಯನ್ನು ವಿಸ್ತರಿಸಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆದೇಶಿಸಿದೆ.
ಇಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಮಾಹಿತಿ ನೀಡಿದ್ದು, UG NEET-2024ರ Mop- Up ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವ ಅರ್ಹರಿಗೆ ವೈದ್ಯಕೀಯ ಕೋರ್ಸ್ ಶುಲ್ಕದ ಮುಂಗಡ ಪಾವತಿಗೆ ಅ.15ರ ಮಧ್ಯಾಹ್ನ 12 ಗಂಟೆವರೆಗೆ ಹಾಗೂ Options ದಾಖಲಿಸಲು ಮಧ್ಯಾಹ್ನ 3 ಗಂಟೆವರೆಗೆ ಸಮಯ ವಿಸ್ತರಿಸಲಾಗಿದೆ. ಅದರ ಬಳಿಕ ಯಾವ ವಿಸ್ತರಣೆಯೂ ಇರುವುದಿಲ್ಲ ಎಂದು ತಿಳಿಸಿದ್ದಾರೆ.
#UGNEET-2024ರ Mop- Up ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವ ಅರ್ಹರಿಗೆ ವೈದ್ಯಕೀಯ ಕೋರ್ಸ್ ಶುಲ್ಕದ ಮುಂಗಡ ಪಾವತಿಗೆ ಅ.15ರ ಮಧ್ಯಾಹ್ನ 12 ಗಂಟೆವರೆಗೆ ಹಾಗೂ Options ದಾಖಲಿಸಲು ಮಧ್ಯಾಹ್ನ 3 ಗಂಟೆವರೆಗೆ ಸಮಯ ವಿಸ್ತರಿಸಲಾಗಿದೆ. ಅದರ ಬಳಿಕ ಯಾವ ವಿಸ್ತರಣೆಯೂ ಇರುವುದಿಲ್ಲ.
– ಎಚ್. ಪ್ರಸನ್ನ, ED #KEA@CMofKarnataka @drmcsudhakar— ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) (@KEA_karnataka) October 14, 2024
ಮಡಿಕೇರಿ: ಅ.15ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut